ಸ್ಯಾಫ್ ಪುಟ್ಬಾಲ್ ಪಂದ್ಯಾಟ ➤ 9ನೇ ಬಾರಿಗೆ ಚಾಂಪಿಯನ್ ಆದ ಭಾರತ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 04. ಫೈನಲ್‌ ಪಂದ್ಯದಲ್ಲಿ ಕುವೈತ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಅಂತರದಿಂದ ಮಣಿಸಿದ ಭಾರತ ಸ್ಯಾಫ್ ಕಪ್ ಪುಟ್‌ಬಾಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮಂಗಳವಾರದಂದು ನಡೆದ ಪೈನಲ್‌ ಪಂದ್ಯಾಟದಲ್ಲಿ ನಿಗದಿತ ಸಮಯದ ಅಂತ್ಯಕ್ಕೆ ಎರಡೂ ತಂಡಗಳು ತಲಾ 1 ಗೋಲು ಗಳಿಸಿದ್ದವು. ಹೆಚ್ಚುವರಿ ಸಮಯದಲ್ಲೂ ಉಭಯ ತಂಡಗಳು ಸಮಬಲ ಕಾಯ್ದ ಕಾರಣ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್ ನಲ್ಲೂ ಎರಡೂ ತಂಡಗಳು ತೀವ್ರ ಪೈಪೋಟಿ ನಡೆಸಿ, ಒಂದು ಹಂತದಲ್ಲಿ 4-4ರಿಂದ ಸಮಬಲ ಸಾಧಿಸಿದ್ದವು.

Also Read  ಕರಾವಳಿಯಲ್ಲಿ ಭಾರೀ ಮಳೆಯ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ➤ ಜಿಲ್ಲೆಯಾದ್ಯಂತ ರೆಡ್ ಅಲೆರ್ಟ್ ಘೋಷಣೆ ➤ ಮುನ್ನೆಚ್ಚರಿಕಾ ಕ್ರಮವಾಗಿ ಶನಿವಾರದಂದು ಶಾಲಾ ಕಾಲೇಜುಗಳಿಗೆ ರಜೆ

ಮಹೇಶ್ ಸಿಂಗ್ ಭಾರತಕ್ಕೆ 5-4 ಮುನ್ನಡೆ ಒದಗಿಸಿಕೊಟ್ಟರು. ಕುವೈತ್ನ ನಿರ್ಣಾಯಕ ಸ್ಪಾಟ್ ಕಿಕ್‌ನ್ನು ಗುರುಪ್ರೀತ್ ವಿಫಲಗೊಳಿಸುವುದರೊಂದಿಗೆ ಹಾಲಿ ಚಾಂಪಿಯನ್ ಭಾರತ ರೋಚಕ ಜಯ ಸಾಧಿಸಿ ಪ್ರಶಸ್ತಿ ಉಳಿಸಿಕೊಂಡಿತು. ಸುನಿಲ್ ಛೇಟ್ರಿ ನೇತೃತ್ವದ ಭಾರತ ಫುಟ್ಬಾಲ್ ತಂಡವು 9ನೇ ಬಾರಿಗೆ ಸ್ಯಾಪ್ ಕಪ್ ಜಯಿಸಿ ದಾಖಲೆ ನಿರ್ಮಿಸಿದೆ.

error: Content is protected !!
Scroll to Top