ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ► ಕಳೆದ 14 ತಿಂಗಳಲ್ಲೇ ಗರಿಷ್ಠ ಏರಿಕೆ



(ನ್ಯೂಸ್ ಕಡಬ) newskadaba.com ನವದೆಹಲಿ, ಜ.25. ಕಳೆದ 14 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ದರದಲ್ಲಿ ಭಾರಿ ಏರಿಕೆಯಾಗಿದ್ದು, ಪ್ರಸ್ತುತ 10 ಗ್ರಾಂ. ಚಿನ್ನದ ದರ 31,450 ರೂ.ಗೆ ಏರಿದೆ.





ಚಿನ್ನದ ದರ ಒಂದೇ ದಿನದಲ್ಲಿ 350 ರೂ. ಏರಿಕೆ ಕಂಡಿದೆ. ಸ್ಥಳೀಯ ವ್ಯಾಪಾರಿಗಳು ಆಭರಣ ಖರೀದಿಸುವುದು ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ‌. ಬೆಳ್ಳಿಯ ಬೆಲೆಯಲ್ಲೂ ಏರಿಕೆಯಾಗಿದ್ದು, ಕೆಜಿ ಬೆಳ್ಳಿಗೆ 41 ಸಾವಿರವಾಗಿದ್ದು, ಪ್ರತೀ ಕೆಜಿಯಲ್ಲಿ 1,100 ರೂ. ರೂಪಾಯಿ ಏರಿಕೆಯಾಗಿದೆ.






error: Content is protected !!
Scroll to Top