ಚಿತ್ರೀಕರಣದ ವೇಳೆ ಗಾಯ ➤ ಮಲಯಾಳಂ ನಟ ಪೃಥ್ವಿರಾಜ್ ಗೆ ಇಂದು ಶಸ್ತ್ರಕ್ರಿಯೆ

(ನ್ಯೂಸ್ ಕಡಬ) newskadaba.com ಕೊಚ್ಚಿ, ಜೂ. 26. ಕೇರಳದ ಇಡುಕ್ಕಿ ಮರಯೂರ್‌ ಎಂಬಲ್ಲಿ ಮಲಯಾಳಂ ಚಿತ್ರ “ವಿಲಾಯತ್‌ ಬುದ್ಧ” ಇದರ ಚಿತ್ರೀಕರಣದ ವೇಳೆ ಕಾಲುಜಾರಿ ಬಿದ್ದು ಗಾಯಗೊಂಡಿದ್ದ ನಟ ಪೃಥ್ವಿರಾಜ್ ಅವರಿಗೆ ಇಂದು ಶಸ್ತ್ರಕ್ರಿಯೆ ನಡೆಯಲಿದೆ.

ಬಸ್‌ ತಂಗುದಾಣವೊಂದರಲ್ಲಿ ಫೈಟ್‌ ದೃಶ್ಯದ ಚಿತ್ರೀಕರಣ ವೇಳೆ ಹಾರುವಾಗ ಕಾಲುಜಾರಿ ಬಿದ್ದ ಪೃಥ್ವಿರಾಜ್ ಅವರ ಕಾಲಿನ ಲಿಗಮೆಂಟ್‌ಗೆ ಗಾಯವಾಗಿದ್ದು ಅವರನ್ನು ಇಡುಕ್ಕಿಯ ಹತ್ತಿರದ ಆಸ್ಪತ್ರೆಗೆ ಮೊದಲು ದಾಖಲಿಸಿ, ನಂತರ ಅಲ್ಲಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಅವರಿಗೆ ಕೀಹೋಲ್‌ ಶಸ್ತ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ. ʻವಿಲಾಯತ್‌ ಬುದ್ಧʼ ಚಲನಚಿತ್ರವು ಜಯನ್‌ ನಂಬಿಯಾರ್‌ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದ್ದು, ಅವರು ಈ ಹಿಂದೆ ಪೃಥ್ವಿರಾಜ್ ಅಭಿನಯದ ‘ಅಯ್ಯಪ್ಪನುಂ ಕೋಶಿಯುಂ’ ಎಂಬ ಭಾರೀ ಜನಪ್ರಿಯತೆ ಪಡೆದ ಚಲನಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ‘ವಿಲಾಯತ್‌ ಬುದ್ಧʼ ಚಿತ್ರದಲ್ಲಿ ಪ್ರಥ್ವೀರಾಜ್‌ ಅವರು ‘ಡಬಲ್‌ʼ ಮೋಹನನ್‌ ಪಾತ್ರ ನಿರ್ವಹಿಸುತ್ತಿದ್ದಾರೆ.

Also Read  ಹೊಸ ರೂಪಾಂತರಿ ವೈರಸ್ ಭೀತಿ ➤ ಗಡಿ ಭಾಗಗಳ ಚೆಕ್ ಪೋಸ್ಟ್ ಗಳಲ್ಲಿ ಅಧಿಕಾರಿಗಳಿಂದ ಕಟ್ಟೆಚ್ಚರ..!

error: Content is protected !!
Scroll to Top