ಏಷ್ಯನ್ ಎಮರ್ಜಿಂಗ್ ಕ್ರಿಕೆಟ್ ಟೂರ್ನಿ ➤ ಫೈನಲ್ ಪ್ರವೇಶಿಸಿದ ಭಾರತದ ಮಹಿಳಾ ತಂಡ

(ನ್ಯೂಸ್ ಕಡಬ) newskadaba.com ಹಾಂಕಾಂಗ್‌, ಜೂ. 20. ಹಾಂಕಾಂಗ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಎಮರ್ಜಿಂಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡವು ಫೈನಲ್‌ ಪ್ರವೇಶಿಸಿದೆ.

ಭಾರತವು ಸೆಮಿಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಬೇಕಾಗಿತ್ತು. ಆದರೆ, ಮಳೆಯ ಕಾರಣದಿಂದ ಈ ಪಂದ್ಯ ರದ್ದಾಗಿದೆ. ಎ ಬಣದಲ್ಲಿ ಸ್ಥಾನ ಪಡೆದಿದ್ದ ಭಾರತ ಅಲ್ಲಿ ಗ್ರೂಪ್‌ ನಲ್ಲಿ ಅಗ್ರಸ್ಥಾನ ಪಡೆದಿತ್ತು. ಶ್ರೀಲಂಕಾ ಬಿ ಬಣದಲ್ಲಿ 2ನೇ ಸ್ಥಾನಿಯಾಗಿತ್ತು. ಗ್ರೂಪ್‌ ಹಂತದ ಅಗ್ರಸ್ಥಾನವನ್ನು ಭಾರತ ಪಡೆದಿದ್ದರಿಂದ ಭಾರತ ಫೈನಲ್‌ಗೆ ಪ್ರವೇಶ ಪಡೆದಿದೆ.

Also Read  ಹೆಚ್ಚಿದ ಲೋನ್ ಆ್ಯಪ್ ಗಳಿಂದಾಗಿ ಗ್ರಾಹಕರಿಗೆ ಕಿರುಕುಳದ ➤ ನೂರಾರು ಆ್ಯಪ್ ಗಳನ್ನು ರದ್ದು ಮಾಡಿದ ಪ್ಲೇಸ್ಟೋರ್

error: Content is protected !!
Scroll to Top