ಇತಿಹಾಸ ಸೃಷ್ಟಿಸಿದ ಇಂಧನ ಬೆಲೆ ► ಪೆಟ್ರೋಲ್ ಲೀ.ಗೆ 80 ರೂ.

(ನ್ಯೂಸ್ ಕಡಬ) newskadaba.com ಮುಂಬಯಿ, ಜ.23. ದಿನೇದಿನೇ ತೈಲ ಬೆಲೆಯು ಗಗನಕ್ಕೇರುತ್ತಿದ್ದು, ಮುಂಬೈನಲ್ಲಿ ಮಂಗಳವಾರದಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 80.25 ರೂ. ಆಗುವುದರ ಮೂಲಕ ಇತಿಹಾಸ ಸೃಷ್ಟಿಸಿದೆ.

ತೈಲ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದು, ಡೀಸೆಲ್ ಬೆಲೆ ಲೀಟರ್ ಗೆ 67.30 ರೂ. ಏರುವುದರ ಮೂಲಕ ಹೊಸ ದಾಖಲೆ ಬರೆದಿದೆ. ಚೆನ್ನೈ ಮತ್ತು ಕೋಲ್ಕತ್ತದಲ್ಲಿ ಪೆಟ್ರೋಲ್ ಬೆಲೆ 75 ರೂ. ಗಡಿ ದಾಟಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 72.38 ರೂ. ಆಗಿದ್ದು, ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 75.06 ರೂ., ಕೋಲ್ಕತ್ತದಲ್ಲಿ 75.09 ರೂ. ಗೆ ಏರಿಕೆಯಾಗಿದೆ. ಮುಂಬೈನಲ್ಲಿ 2014 ರ ಆಗಸ್ಟ್ ಬಳಿಕ ನಿನ್ನೆ ಪೆಟ್ರೋಲ್ ಬೆಲೆ 80 ರೂ. ಗಡಿ ದಾಟಿತ್ತು. ಇಂದು ಮತ್ತೆ 15 ಪೈಸೆ ಜಾಸ್ತಿಯಾಗಿದೆ. 2017 ರ ಡಿಸೆಂಬರ್ ನಿಂದ ತೈಲ ಬೆಲೆ ಏರುಗತಿಯಲ್ಲಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ.

Also Read  ಹಾಸ್ಟೆಲ್ ರೂಂನಲ್ಲಿ ವಿದ್ಯಾರ್ಥಿನಿ ಕೊಲೆ ಪ್ರಕರಣ ➤ ನಾಪತ್ತೆಯಾಗಿದ್ದ ಸೆಕ್ಯುರಿಟಿ ಗಾರ್ಡ್ ಮೃತದೇಹ ಪತ್ತೆ

error: Content is protected !!
Scroll to Top