ಒಪ್ಪಿಗೆ ಇಲ್ಲದೆ ಮಹಿಳೆಯ ಮೈ ಮುಟ್ಟುವಂತಿಲ್ಲ ► ನ್ಯಾಯಾಲಯ ತಾಕೀತು

(ನ್ಯೂಸ್ ಕಡಬ) newskadaba.com ನವದೆಹಲಿ, ಜ.22. ಮಹಿಳೆಯ ಒಪ್ಪಿಗೆ ಇಲ್ಲದೆ ಯಾರೂ ಆಕೆಯ ಮೈಯನ್ನು ಮುಟ್ಟುವಂತಿಲ್ಲ ಎಂದು ದೆಹಲಿ ನ್ಯಾಯಾಲಯ ತಾಕೀತು ಮಾಡಿದೆ.

ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಉತ್ತರ ಪ್ರದೇಶದ ಚಾವಿ ರಾಮ್‌ ಎಂಬ ಅಪರಾಧಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶರು, ಮಹಿಳೆಯ ದೇಹ ಆಕೆಯ ವಿಶೇಷ ಸ್ವತ್ತಾಗಿದ್ದು, ಅದರ ಮೇಲೆ ಆಕೆಗಲ್ಲದೇ ಬೇರೆ ಯಾರಿಗೂ ಅಧಿಕಾರ ಇಲ್ಲ. ಆಕೆಯ ಒಪ್ಪಿಗೆ ಇಲ್ಲದೆ ಆಕೆಯ ದೇಹವನ್ನು ಯಾರೂ ಸ್ಪರ್ಶಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮಹಿಳೆಯ ಈ ಸ್ವಾತಂತ್ರ್ಯವನ್ನು ಪುರುಷರು ಗೌರವಿಸಬೇಕು. ಕಾಮುಕರು ಮತ್ತು ವಿಕೃತಕಾಮಿಗಳು ತಮ್ಮ ಲೈಂಗಿಕ ತೃಷೆಗೆ ಪುಟ್ಟ ಬಾಲಕಿಯರನ್ನು ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡು ಮತ್ತು ಅಮಾನವೀಯ ಎಂದು ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದರು.

Also Read  ದುಬೈನಿಂದ ಆಗಮಿಸಿದ್ದ 20 ಮಂದಿ ಕ್ವಾರಂಟೈನ್ ಗೆ ಒಳಗಾಗದೇ ಪರಾರಿ ➤ ಕೊಡಗು ಹಾಗೂ ಮಂಗಳೂರಿಗೆ "ಕೊರೋನಾ" ಭೀತಿ

error: Content is protected !!
Scroll to Top