ಯುವತಿಯ ಅಪಹರಣ ಪ್ರಕರಣ ► ಮುಂಬೈ ಪೊಲೀಸರಿಂದ ಬಜರಂಗ ದಳ ಮುಖಂಡ ಸುನಿಲ್ ಪಂಪ್ ವೆಲ್ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.19. ಲವ್ ಜಿಹಾದ್ ವದಂತಿ ಸೃಷ್ಟಿಸಿದ್ದ ಕಾಸರಗೋಡಿನ ಕಾನೂನು ವಿದ್ಯಾರ್ಥಿನಿ ರೇಷ್ಮಾ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದ್ದು, ರೇಷ್ಮಾ ಅವರನ್ನು ಅಪಹರಣ ಮಾಡಿರುವ ಆರೋಪದಲ್ಲಿ ಮಂಗಳೂರಿನ ಭಜರಂಗದಳದ ನಾಯಕ ಸುನೀಲ್ ಪಂಪ್ ವೆಲ್ ನನ್ನು ಮುಂಬೈ ಪೊಲೀಸರು ಗುರುವಾರದಂದು ಬಂಧಿಸಿದ್ದಾರೆ.

ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದ ಕಾಸರಗೋಡಿನ ಶ್ರೀಮಂತ ಕುಟುಂಬದ ರೇಷ್ಮಾ ಹಾಗೂ ಮೂರು ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಇಕ್ಬಾಲ್ ನಡುವೆ ಪ್ರೇಮಾಂಕುರವಾಗಿತ್ತು. ಇದ್ದಕ್ಕಿದ್ದಂತೆ ನಾಪತ್ತೆಯಾದ ರೇಷ್ಮಾ ಮುಂಬೈನಲ್ಲಿ ಇಕ್ಬಾಲ್ ನನ್ನು ಮದುವೆಯಾಗಿ ಜೊತೆಯಲ್ಲಿ ವಾಸವಾಗಿದ್ದರು. ಈ ಮಧ್ಯೆ ಇಕ್ಬಾಲ್ ವಿರುದ್ಧ ರೇಷ್ಮಾ ಪೋಷಕರು ಅಪಹರಣ ಪ್ರಕರಣ ದಾಖಲಿಸಿ ರೇಷ್ಮಾಳನ್ನು ಮುಂಬೈನಿಂದ ಕರೆತರಲಾಗಿತ್ತು. ತನ್ನ ಪತ್ನಿ ರೇಷ್ಮಾಳನ್ನು ಅಪಹರಣ ಮಾಡಲಾಗಿದೆ ಎಂದು ಪತಿ ಇಕ್ಬಾಲ್ ಮುಂಬೈ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿರುವ ಮುಂಬೈ ಪೊಲೀಸರು ಬಜರಂಗದಳ ಕಾರ್ಯಕರ್ತ ಸುನೀಲ್ ಪಂಪ್ ವೆಲ್ ನನ್ಬು ಗುರುವಾರ ಬಂಧಿಸಿದ್ದಾರೆ.

Also Read  2019 ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಮತ ಬೇಟೆಯಾಡಿದ ಬಿಜೆಪಿ ➤ ಕಡಬದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

error: Content is protected !!
Scroll to Top