ಕೌಟುಂಬಿಕ ಕಲಹ ಹಿನ್ನೆಲೆ➤ ಪತ್ನಿಯನ್ನೇ ಹತ್ಯೆಗೈದ ಪತಿ..!

(ನ್ಯೂಸ್ ಕಡಬ) newskadaba.com ಯಾದಗಿರಿ,ಮೇ.17 ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಪತಿಯೇ ಹತ್ಯೆಗೈದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ನಡೆದಿದೆ.ಮಲಗಿದ್ದಾಗ ಕತ್ತು ಹಿಸುಕಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಲಕ್ಷ್ಮೀ ಮೃತ ಮಹಿಳೆ.

ನಿಂಗಪ್ಪ ಪತ್ನಿಯನ್ನೇ ಕೊಲೆಗೈದ ಪತಿ. ಕೌಟುಂಬಿಕ ಕಲಹದಿಂದಾಗಿ ಪತಿ ಹಾಗೂ ಪತ್ನಿ ಇಬ್ಬರೂ ದೂರವಿದ್ದರು.ಮಗಳ ಮದುವೆ ಎಂದು ಪತಿ ನಿಂಗಪ್ಪ ಮನೆಗೆ ವಾಪಸ್ ಬಂದಿದ್ದ. ರಾತ್ರಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

Scroll to Top