ಪುತ್ತೂರು ಧರ್ಮಪ್ರಾಂತ್ಯದ ಸ್ಥಾಪಕ ಧರ್ಮಾಧ್ಯಕ್ಷರು ಇನ್ನಿಲ್ಲ ► ಕೇರಳದಲ್ಲಿ ವಿಧಿವಶರಾದ ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್

(ನ್ಯೂಸ್ ಕಡಬ) newskadaba.com ಪುತ್ತೂರು, ಜ.16. ಪುತ್ತೂರು ಧರ್ಮಪ್ರಾಂತ್ಯದ ಸ್ಥಾಪಕ ಧರ್ಮಾಧ್ಯಕ್ಷರಾಗಿದ್ದ ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್ ರವರು ಮಂಗಳವಾರದಂದು ವಿಧಿವಶರಾದರು.

ದೀರ್ಘ ಕಾಲದ ಅನಾರೋಗ್ಯದಿಂದಾಗಿ ಕೇರಳದ ಪುಷ್ಪಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಸುಮಾರು 7 ವರ್ಷಗಳ ಕಾಲ ಪುತ್ತೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು‌. ಮೂಲತಃ ಪುತ್ತೂರು ತಾಲೂಕಿನ ಇಚಿಲಂಪಾಡಿ ನಿವಾಸಿಯಾಗಿದ್ದ ಇವರು 2010 ರಲ್ಲಿ ಪುತ್ತೂರು ಧರ್ಮ ಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಸೈಂಟ್ ಜಾನ್ ಕೆಥೆಡ್ರಲ್ ತಿರುವಲ್ಲದಲ್ಲಿ ಜನವರಿ 18 ರಂದು ಅಪರಾಹ್ನ 2 ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ.

Also Read  ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವವರಿಗೆ ಹೊಸ ರೂಲ್ಸ್ ಜಾರಿ ➤ ಪಾಲಿಸದಿದ್ದಲ್ಲಿ ಬೀಳಲಿದೆ ದುಬಾರಿ ದಂಡ

error: Content is protected !!
Scroll to Top