ಎಕ್ಸ್‌ಪ್ರೆಸ್ ವೇಯಲ್ಲಿ ಅಪಘಾತ ಕೊಡಗಿನ ತಾಯಿ- ಮಗ ಸಾವು

(ನ್ಯೂಸ್ ಕಡಬ) Newskadaba.com ಬೆಂಗಳೂರು; ಮಾ,25  ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ಟೆಂಪೊ ಹಠಾತ್‌ ಬ್ರೇಕ್‌ ಹಾಕಿದ ಕಾರಣ ಹಿಂದೆ ಬರುತ್ತಿದ್ದ ಕಾರು ಡಿಕ್ಕಿಯಾಗಿ  ಭೀಕರ ಅಪಘಾತ ಸಂಭವಿಸಿದೆ.

ಕೊಡಗು ಜಿಲ್ಲೆ, ನಾಪೋಕ್ಲು ಬಲಮುರಿ ನಿವಾಸಿಗಳಾದ ಕವಿತಾ (47), ಅವರ ಪುತ್ರ ಆರ್ಯ ಅಯ್ಯಪ್ಪನ್ (14) ಮೃತಪಟ್ಟಿದ್ದಾರೆ.ಕಾರು ಚಾಲನೆ ಮಾಡುತ್ತಿದ್ದ ಆರ್ಯ ತಂದೆ ಮುತ್ತಪ್ಪ (54) ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಕುಟುಂಬ ಯುಗಾದಿ ಹಬ್ಬಕ್ಕಾಗಿ ಸ್ವಗ್ರಾಮಕ್ಕೆ ಬಂದಿತ್ತು. ಹಬ್ಬ ಮುಗಿಸಿ ಮಾರುತಿ ಸ್ವಿಫ್ಟ್‌ ಕಾರ್‌ನಲ್ಲಿ ವಾಪಸ್‌ ತೆರಳುವ ವೇಳೆ ಈ ಘಟನೆ ಸಂಭವಿಸಿದೆ.

 

 

 

Scroll to Top