ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪತ್ತೆ ➤ ಆತಂಕದಲ್ಲಿ ಜನರು…!

(ನ್ಯೂಸ್ ಕಡಬ)newskadaba.com ಸುಬ್ರಮಣ್ಯ, ಮಾ.25. ಸುಬ್ರಹ್ಮಣ್ಯದಲ್ಲಿ ಹೊಳೆ ಬದಿಯಲ್ಲಿ ಕಾಡಾನೆ ಕಾಣಿಸಿಕೊಂಡ ಘಟನೆ ಸುಬ್ರಮಣ್ಯದಲ್ಲಿ ವರದಿಯಾಗಿದೆ. ಸುಬ್ರಹ್ಮಣ್ಯ ಸಮೀಪದ ಆದಿಸುಬ್ರಹ್ಮಣ್ಯದ ಕಲ್ಲಗಡ್ಡೆ ಎಂಬಲ್ಲಿ ಹೊಳೆ ಬದಿಯಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಹೊಳೆಗೆ ನೀರು ಕುಡಿಯಲು ಬಂದಿದ್ದ ಆನೆ ಬಳಿಕ ಕಾಡಿಗೆ ವಾಪಸ್ಸಾಗಿದೆ ಎಂದು ತಿಳಿದು ಬಂದಿದೆ.


ಐತ್ತೂರು- ಕಡ್ಯ ಕೊಣಾಜೆ ಸಂಪರ್ಕ ರಸ್ತೆಯ ಕೊಣಾಜೆ ಬಳಿಯ ರಾಮನಗರ ಕ್ರಾಸ್‌ನಲ್ಲಿ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಕಾಡಾನೆ ದಾಟಿದೆ. ರಬ್ಬರ್ ತೋಟವೊಂದರಿಂದ ಈ ಆನೆ ರಸ್ತೆಗೆ ಇಳಿದಿತ್ತು. ಬಳಿಕ ಆ ರಸ್ತೆಯನ್ನು ದಾಟಿ ಇನ್ನೊಂದು ಬದಿಯಲ್ಲಿರುವ ರಬ್ಬರ್ ತೋಟಕ್ಕೆ ಘೀಳಿಡುತ್ತಾ ಹೋಗಿದೆ. ಕೆಲಸದಿಂದ ಮನೆಗಳಿಗೆ ರಸ್ತೆ ಮುಖಾಂತರ ಸಾಗುತ್ತಿದ್ದವರಿಗೆ ಕಾಡಾನೆ ಕಾಣ ಸಿಕ್ಕಿದೆ ಎನ್ನಲಾಗಿದೆ. ಕಾಡಾನೆ ನಾಡಿಗೆ ಆಗಮಿಸಿದ್ದರಿಂದ ಇಲ್ಲಿನ ಜನರಲ್ಲಿ ಆತಂಕ ಮನೆ ಮಾಡಿದೆ.

Scroll to Top