ಮೈಸೂರು ದಸರಾ ಕಂಬಳ: ಕರಾವಳಿಯಿಂದ ಹೊರಡಲಿವೆ 160 ಜೋಡಿ ಕೋಣಗಳು!

(ನ್ಯೂಸ್ ಕಡಬ) newskadaba.com, ಸೆ.28 . ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 18 ಮತ್ತು 19ರಂದು ಸಾಂಪ್ರದಾಯಿಕ ಕಂಬಳ ಕ್ರೀಡಾಕೂಟ ನಡೆಯಲಿದೆ.ಅಕ್ಟೋಬರ್ 16ರಂದು ಬೆಳಿಗ್ಗೆ 10:30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ 160 ಜೋಡಿ ಕೋಣಗಳು ಮೈಸೂರಿಗೆ ಹೊರಡಲಿದ್ದು, ಅಕ್ಟೋಬರ್ 10ರಂದು 5 ಜೋಡಿ ಕೋಣಗಳೊಂದಿಗೆ ಪ್ರಾಯೋಗಿಕ ಓಟ ನಡೆಯಲಿದೆ.


ಕೋಣಗಳ ಸಾರಿಗೆ ಮತ್ತು ನಿರ್ವಹಣೆಗೆ ಹಿರಿಯ ವಿಭಾಗಕ್ಕೆ ₹65,000 ಹಾಗೂ ಕಿರಿಯ ವಿಭಾಗಕ್ಕೆ ₹50,000 ಪ್ರೋತ್ಸಾಹಧನ ನೀಡಲಾಗುವುದು.ಹಿರಿಯ ವಿಭಾಗದ ವಿಜೇತ ಕೋಣಗಳ ಮಾಲೀಕರಿಗೆ 16 ಗ್ರಾಂ ಚಿನ್ನ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ 8 ಗ್ರಾಂ ಚಿನ್ನದ ಬಹುಮಾನ ಸಿಗಲಿದೆ.


ಕಂಬಳ ವೀಕ್ಷಣೆಗೆ 15,000 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಕರಾವಳಿ ಶೈಲಿಯ ವೈವಿಧ್ಯಮಯ ಖಾದ್ಯ ಮಳಿಗೆಗಳು ಪ್ರಮುಖ ಆಕರ್ಷಣೆಯಾಗಿರಲಿವೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

Scroll to Top