ತಲೆಗೆ ಕಲ್ಲು ಎತ್ತಿಹಾಕಿ ಸಾಮಾಜಿಕ ಕಾರ್ಯಕರ್ತೆಯ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com ಕಲಬುರಗಿ, ಮಾ. 23. ಸ್ಕೂಟಿಯಲ್ಲಿ ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತೆಯೊಬ್ಬರನ್ನು ಕಾರಿನಿಂದ ಡಿಕ್ಕಿ ಹೊಡೆಸಿ, ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಮೃತ ಸಾಮಾಜಿಕ ಕಾರ್ಯಕರ್ತೆಯನ್ನು ಕಲಬುರಗಿ ನಗರದ ಜಂಜಂ ಕಾಲೋನಿ ನಿವಾಸಿ ಮುಜತ್ ಸುಲ್ತಾನ್(35) ಎಂದು ಗುರುತಿಸಲಾಗಿದೆ. ಮುಜತ್ ಸುಲ್ತಾನ್ ರನ್ನು ವಸೀಂ ಶೇಖ್, ನದೀಮ್, ಅಜೀಮ್ ಶೇಖ್ ಮತ್ತು ನದೀಮ್ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Scroll to Top