ಮಂಗಳೂರು: ಪಾರ್ಕಿಂಗ್ ಗೆ ನಿಲ್ಲಿಸಿದ್ದ ಆಟೋ ಚಾಲಕನಿಗೆ ಥಳಿಸಿ ಹಲ್ಲೆ ➤ ಪ್ರಕರಣ ದಾಖಲು   

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 21.ಪಾರ್ಕಿಂಗ್ ಗೆ ನಿಲ್ಲಿಸಿದ್ದ ಆಟೋ ಚಾಲಕನೊಬ್ಬನಿಗೆ ಉಳಿದ ಆಟೋ ಚಾಲಕರು ಥಳಿಸಿ ಗಾಯಗೊಳಿಸಿದ ಘಟನೆ ಪಣಂಬೂರು ಬೀಚ್ ನಲ್ಲಿ ನಡೆದಿದೆ.

ಗಾಯಗೊಂಡ ಚಾಲಕನನ್ನು ಹೇಮಚಂದ್ರ ಎಂದು ಗುರುತಿಸಲಾಗಿದೆ. ಪ್ರಯಾಣಿಕರೊಬ್ಬರ ಬಾಡಿಗೆ ನಿಮಿತ್ತ ಹೇಮಚಂದ್ರ ಅವರು ಪಣಂಬೂರು ಪಾರ್ಕ್ ಗೆ ಹೋಗಿದ್ದು, ಈ ವೇಳೆ ಸ್ಥಳಕ್ಕೆ ಬಂದ 10 ಮಂದಿ ಆಟೋ ಚಾಲಕರ ತಂಡ “ನೀನು ಇಲ್ಲಿ ಬಾಡಿಗೆ ಮಾಡಬಾರದು. ಇದು ನಮ್ಮ ಏರಿಯಾ, ಇಲ್ಲಿ ನಾವು ಮಾತ್ರ ಬಾಡಿಗೆ ಮಾಡುವುದು” ಎಂದು ಬೆದರಿಸಿ, ಥಳಿಸಿದ್ದಾರೆ ಎಂದು ತಿಳಿದುಬಂದಿದೆ.

Scroll to Top