ಶೀಘ್ರದಲ್ಲೇ ಬರಲಿದೆ 10 ರೂ‌. ನೂತನ ನೋಟು ► ನೂತನ ನೋಟಿನ ವಿನ್ಯಾಸ ಹೇಗಿದೆ ಎಂದು ತಿಳಿಯಬೇಕೆ…?

(ನ್ಯೂಸ್ ಕಡಬ) newskadaba.com ನವದೆಹಲಿ, ಜ.05. ಹತ್ತು ರೂ. ಮುಖಬೆಲೆಯ ನೂತನ ನೋಟನ್ನು ಶೀಘ್ರದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆಗೊಳಿಸಲಿದೆ ಎಂದು ಆರ್ ಬಿ ಐ ಪ್ರಕಟಿಸಿದೆ.

12.3 ಸೆಂ.ಮೀ. ಉದ್ದ ಹಾಗೂ 6.3 ಸೆಂ.ಮೀ. ಅಗಲ ನೂತನ ನೋಟಿನಲ್ಲಿ ಕೋನಾರ್ಕ್ ಪ್ರಸಿದ್ಧ ಸೂರ್ಯ ದೇವಸ್ಥಾನದ ವಿಶೇಷ ಚಿತ್ರಣ ಇರಲಿದೆ‌. ಚಾಕೊಲೇಟ್ ಕಂದು ಬಣ್ಣದಲ್ಲಿ ಮುದ್ರಣಗೊಳ್ಳಲಿರುವ ಈ ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧಿಯವರ ಚಿತ್ರವಿರಲಿದ್ದು, ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ರವರ ಸಹಿ ಇರಲಿದೆ ಎಂದು ಆರ್ಬಿಐ ತಿಳಿಸಿದೆ.

Also Read  ಜಾರ್ಖಂಡ್ ವಿಧಾನಸಭೆ ಚುನಾವಣೆ: ಮೂರನೇ ಹಂತದ ಮತದಾನ ಆರಂಭ

error: Content is protected !!
Scroll to Top