ಮಹಡಿಯಿಂದ ಬಿದ್ದು ಒಂದೂವರೆ ವರ್ಷದ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 15. ಕಟ್ಟಡದ ಮೇಲಿಂದ ಬಿದ್ದು ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಚಾಮರಾಜಪೇಟೆಯ ಆಜಾದ್ ನಗರದ 6ನೇ ಕ್ರಾಸ್​ನಲ್ಲಿ ನಡೆದಿದೆ.

ಮೃತ ಮಗುವನ್ನು ವಿನಯ್ ಎಂಬವರ ಪುತ್ರಿ ದೀಕ್ಷಾ ಎಂದು ಗುರುತಿಸಲಾಗಿದೆ. ಆಕೆಯ ತಾಯಿ ಊಟ ಮಾಡಿಸುತ್ತಿದ್ದ ವೇಳೆ ಆಟವಾಡುತ್ತಿದ್ದ ದೀಕ್ಷಾ ಗ್ರಿಲ್ಸ್ ಮೇಲೆ ಹತ್ತಿದ್ದು, ಬಳಿಕ ನೋಡ ನೋಡುತ್ತಿದ್ದಂತೆ ಜಾರಿ ಕೆಳಕ್ಕೆ ಬಿದ್ದಿದ್ದಾಳೆ. ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮಗು ಕೊನೆಯುಸಿರೆಳೆದಿದೆ ಎನ್ನಲಾಗಿದೆ.

Scroll to Top