(ನ್ಯೂಸ್ ಕಡಬ)newskadaba.com ಮಂಗಳೂರು, ಮಾ. 14. ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸವಾರನೋರ್ವ ಮೃತಪಟ್ಟ ಘಟನೆ ನಗರದ ಲೇಡಿಹಿಲ್ ಬಳಿ ನಡೆದಿದೆ.

ಮೃತ ಸವಾರನನ್ನು ಮುಹಮ್ಮದ್ ಹನೀಫ್(35) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಓರ್ವ ಗಾಯಗೊಂಡಿದ್ದು, ಗಾಯಾಳುವನ್ನು ಬಂಟ್ವಾಳ ತಾಲೂಕಿನ ಮುಹಮ್ಮದ್ ಖಾಸಿಂ ಎಂದು ಗುರುತಿಸಲಾಗಿದೆ. ಮೃತ ಸವಾರ ಮುಹಮ್ಮದ್ ಹನೀಫ್ ಎಂಬವರು ಲೇಡಿಹಿಲ್ ವೃತ್ತದ ಬಳಿ ನಿಯಂತ್ರಣ ತಪ್ಪಿ ಡಿವೈಡರ್ಗೆ ಬಡಿದು, ಬಳಿಕ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ.






