ಬಿಎಸ್ಸೆನ್ನೆಲ್ ನಿಂದಲೂ ಬಂತು ಅಗ್ಗದ ಬೆಲೆಯ ಮೊಬೈಲ್ ಫೋನ್ ► ಕೇವಲ 346 ರೂ‌.ಗಳ ಮೊಬೈಲ್ ಫೋನ್ ಬಿಡುಗಡೆ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.31. ಟೆಲಿಕಾಂ ಕ್ಷೇತ್ರದಲ್ಲಿ ವಿವಿಧ ಕಂಪೆನಿಗಳ ಪೈಪೋಟಿಯಿಂದ ಎಚ್ಚೆತ್ತಿರುವ ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಸಂಸ್ಥೆಯು ಕೇವಲ 346 ರೂ. ಗಳಲ್ಲಿ ನೂತನ ಮೊಬೈಲ್ ಫೋನನ್ನು ಬಿಡುಗಡೆ ಮಾಡಿದೆ.

ಡಿಟೆಲ್ ಡಿ1 ಫೀಚರ್ ಫೋನಿನಲ್ಲಿ ಬಿಎಸ್ಸೆನ್ನೆಲ್ ಸಿಮ್ ಕಾರ್ಡ್ ಇರಲಿದ್ದು, 153 ರೂ. ಹೆಚ್ಚುವರಿ ಪಾವತಿಸಿ ಮೊಬೈಲನ್ನು ಪಡೆದುಕೊಳ್ಳಬಹುದಾಗಿದೆ. ಅದರಲ್ಲಿ 103 ಟಾಕ್ ಟೈಮ್ ದೊರೆಯಲಿದ್ದು, ಬಿಎಸ್ಸೆನ್ನೆಲ್ ನಿಂದ ಬಿಎಸ್ಸೆನ್ನೆಲ್ ಗೆ ಪ್ರತಿ ನಿಮಿಷಕ್ಕೆ 15 ಪೈಸೆಯಂತೆ ದರವನ್ನು ವಿಧಿಸಲಾಗಿದ್ದು, ಉಳಿದ ನೆಟ್ವರ್ಕ್ ಗೆ 40 ಪೈಸೆಯಂತೆ 365 ದಿನಗಳ ವ್ಯಾಲಿಡಿಟಿಯನ್ನು ನೀಡಲಾಗಿದೆ. ಕರೆ ಹಾಗೂ ಎಸ್ಎಂಎಸ್ ಸೌಲಭ್ಯಗಳಿಗಾಗಿ ಒಟ್ಟು 499 ರೂ‌. ಅಗ್ಗದ ಬೆಲೆಯ ಈ ಫೋನಿನಲ್ಲಿ 1.44 ಇಂಚು ಡಿಸ್‌ಪ್ಲೇ, 650 mAh ಬ್ಯಾಟರಿಯೊಂದಿಗೆ ಎಫ್ಎಂ ರೇಡಿಯೋ ಇರಲಿದೆ.

Also Read  ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ ಓರ್ವ ಯೋಧನಿಗೆ ಗಾಯ

error: Content is protected !!
Scroll to Top