ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಎಡಮಂಗಲ: ವಸತಿ ಮಂಜೂರಾತಿಯಲ್ಲಿ ಅಕ್ರಮ – ವಿಎ, ಪಿಡಿಓ ವಿರುದ್ಧ ಪ್ರಕರಣ ದಾಖಲು – News Kadaba

ಎಡಮಂಗಲ: ವಸತಿ ಮಂಜೂರಾತಿಯಲ್ಲಿ ಅಕ್ರಮ – ವಿಎ, ಪಿಡಿಓ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಮ0ಗಳೂರು, ಜೂ.16. ಸುಳ್ಯ ತಾಲೂಕು ಎಡಮಂಗಲ ಗ್ರಾಮದ 2015-16 ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಲ್ಲಿ  ಎಡಮಂಗಲ ಗ್ರಾಮದ ಶಿವಮ್ಮ ಎಂಬವರಿಗೆ ಮನೆ ಮಂಜೂರು ಮಾಡಿದ್ದು, ಶಿವಮ್ಮರ ವಾರ್ಷಿಕ ಆದಾಯ ರೂ 1,93,296/- ಇದ್ದರೂ ಕೂಡಾ ಎಡಮಂಗಲ ಗ್ರಾಮ ಲೆಕ್ಕಾಧಿಕಾರಿ ಬಸವರಾಜ್ ರೂ.31,000/- ಆದಾಯ ಇರುವುದಾಗಿ ಸುಳ್ಳು ಆದಾಯ ಪ್ರಮಾಣ ಪತ್ರ ನೀಡಿರುತ್ತಾರೆ.
ಇದೇ ಪ್ರಕರಣದಲ್ಲಿ ಈ ಹಿಂದೆ ಎಡಮಂಗಲ ಪಿಡಿಓ ಚೆನ್ನಪ್ಪ ಗೌಡ ಬಸವ ವಸತಿ ಯೋಜನೆಯಲ್ಲಿ ಮನೆ ಮಂಜೂರುಗೊಳಿಸಿ ಭ್ರಷ್ಟಾಚಾರ ಎಸಗಿರುವ ಬಗ್ಗೆ ರಾಜೇಶ್ ರೈ ಎಂಬವರು ಎಸಿಬಿಗೆ ದೂರು ಸಲ್ಲಿಸಿರುತ್ತಾರೆ. ಈ ದೂರಿನ ಮೇರೆಗೆ ಜೂನ್ 15 ರಂದು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಡಿವೈಎಸ್‍ಪಿ ಸುಧೀರ್ ಎಂ. ಹೆಗ್ಡೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
Scroll to Top