ಇನ್ಮುಂದೆ ಕಾರುಗಳಲ್ಲಿ ಸೇಫ್ಟಿ ಗಾರ್ಡ್‌ ಹಾಕಿದ್ದರೆ 5 ಸಾವಿರ ದಂಡ ► ಸುತ್ತೋಲೆ ಹೊರಡಿಸಿದ ಕೇಂದ್ರ ಹೆದ್ದಾರಿ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.26. ಕಾರುಗಳಲ್ಲಿ ಅಳವಡಿಸಲಾಗುವ ಕ್ರಾಶ್ ಗಾರ್ಡ್ ಗಳನ್ನು ಅಕ್ರಮ ಎಂದಿರುವ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಅಪಾಯಕಾರಿಯಾಗಿರುವ ಗಾರ್ಡ್ ಗಳನ್ನು ತೆಗೆಯಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದೆ.

ರಸ್ತೆ ಅಪಘಾತ ಸಂದರ್ಭಗಳಲ್ಲಿ ವಾಹನಗಳಿಗೆ ಅಳವಡಿಸಿರುವ ಗಾರ್ಡ್ ಗಳಿಂದ ಪಾದಚಾರಿಗಳಿಗೆ ಹೆಚ್ಚು ಅಪಾಯವಾಗುತ್ತಿದೆ ಎಂದು ತಿಳಿಸಿರುವ ಸಚಿವಾಲಯವು ತಕ್ಷಣವೇ ವಾಹನಗಳಲ್ಲಿ ಅಳವಡಿಸಿರುವ ಕ್ರಾಶ್ ಗಾರ್ಡ್ ಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಅಲ್ಲದೇ ಬುಲ್ ಬಾರ್ ಅಳವಡಿಸಿರುವ ವಾಹನಗಳಿಗೆ ಭಾರೀ ದಂಡವನ್ನು ವಿಧಿಸಲು ಅವಕಾಶವನ್ನು ನೀಡಿದೆ. ಕಾರು, ಎಸ್‍ಯುವಿಗಳಲ್ಲಿ ಅಪಘಾತದ ಸಮಯದಲ್ಲಿ ಹೆಚ್ಚಿನ ಹಾನಿಯಾಗದಿರಲಿ ಎಂಬ ಕಾರಣಕ್ಕೆ ಹಾಗೂ ವಾಹನಗಳ ಅಂದವನ್ನು ಹೆಚ್ಚಿಸಲು ಕಬ್ಬಿಣ ಮತು ಫೈಬರ್ ನಿಂದ ತಯಾರಿಸಲಾಗುವ ಕ್ರಾಶ್ ಗಾರ್ಡ್ ಗಳನ್ನು ಅಳವಡಿಸಲಾಗುತ್ತದೆ. ಕೆಲವರು ಹೆಚ್ಚಿನ ಸಂಖ್ಯೆಯ ಲೈಟ್ ಗಳನ್ನು ಹಾಕಿ ವಾಹನದ ಅಂದವನ್ನು ಹೆಚ್ಚಿಸಲು ಈ ಕ್ರಾಶ್ ಗಾರ್ಡನ್ನು ಅಳವಡಿಸುತ್ತಾರೆ. 1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 52 ರ ಪ್ರಕಾರ ಯಾವುದೇ ರೀತಿಯ ವಾಹನಗಳಿಗೆ ಕ್ರಾಶ್ ಗಾರ್ಡ್ ಅಳವಡಿಸುವುದನ್ನು ನಿಷೇಧಿಸಲಾಗಿದೆ. ಈ ಕಾರಣದಿಂದ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಈ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೆ ಮಾಡಲು ರಾಜ್ಯ ಸರ್ಕಾರಿಗಳಿಗೆ ಪತ್ರ ಬರೆದಿದೆ.

Also Read  ಚಾಕಲೇಟು ಗಂಟಲಲ್ಲಿ ಸಿಲುಕಿ ಬಾಲಕಿ ಮೃತ್ಯು..!

ಕೇಂದ್ರದ ಅದೇಶದ ಅನ್ವಯ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು, ಆಯಾ ರಾಜ್ಯಗಳ ಸಾರಿಗೆ ಇಲಾಖೆ ಕಾರ್ಯದರ್ಶಿಗಳು ಮತ್ತು ಆಯುಕ್ತರು ಈ ಕುರಿತು ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೇ 1998 ರ ಕಾಯ್ದೆಯ 190, 191 ಸೆಕ್ಷನ್ ಗಳ ಅನ್ವಯ ಬುಲ್ ಬಾರ್ ಅಳವಡಿಸಿರುವ ವಾಹನ ಚಾಲಕ ಅಥವಾ ಮಾಲೀಕರಿಗೆ ದಂಡ ವಿಧಿಸುವ ಅವಕಾಶವನ್ನು ನೀಡಲಾಗಿದೆ.

ಅಪಘಾತದ ಸಂದರ್ಭದಲ್ಲಿ ವಾಹನವನ್ನು ರಕ್ಷಿಸಲು ಮತ್ತು ಪಾದಾಚಾರಿಗಳು ವಾಹನ ಸವಾರರಿಗೆ ಗಂಭೀರವಾಗಿ ಏಟು ಬೀಳದೇ ಇರಲಿ ಎನ್ನುವ ಕಾರಣಕ್ಕೆ ಮುಂದುಗಡೆ ಫೈಬರ್ ಬಂಪರ್ ಅಳವಡಿಸಲಾಗುತ್ತದೆ. ಒಂದು ವೇಳೆ ವಾಹನ ಡಿಕ್ಕಿಯಾದಾಗ ಪಾದಚಾರಿಗಳು, ಸವಾರರು ಮೇಲಕ್ಕೆ ಚಿಮ್ಮಿ ಬಾನೆಟ್ ಮೇಲೆ ಬೀಳುವಂತೆ ಈ ಕ್ರಾಶ್ ಗಾರ್ಡ್ ವಿನ್ಯಾಸ ಮಾಡಲಾಗುತ್ತದೆ. ಆದರೆ ಅಪಘಾತದ ವೇಳೆ ವಾಹನಕ್ಕೆ ಡಿಕ್ಕಿ ಹೊಡೆಯುವ ಬೈಕ್ ಸವಾರರಿಗೆ, ಪಾದಚಾರಿಗಳಿಗೆ, ಪ್ರಾಣಿಗಳಿಗೆ ಹೆಚ್ಚಿನ ಪೆಟ್ಟು ಬೀಳುತ್ತದೆ. ಎರಡನೇಯದಾಗಿ ಕಾರಿನಲ್ಲಿ ಡ್ರೈವರ್ ಮತ್ತು ಪ್ರಯಾಣಿಕರ ರಕ್ಷಣೆಗೆ ಏರ್ ಬ್ಯಾಗ್ ಇರುತ್ತದೆ. ಈ ಏರ್ ಬ್ಯಾಗ್ ಸೆನ್ಸರ್ ಗಳನ್ನು ಹೆಡ್ ಲ್ಯಾಂಪ್ ಹಿಂಬಂದಿಯಲ್ಲಿ ಅಳವಡಿಸಲಾಗುತ್ತದೆ. ಆದರೆ ಗಂಭೀರ ಅಪಘಾತವಾದಾಗ ಬುಲ್ ಬಾರ್ ನಿಂದಾಗಿ ಅಪಘಾತದ ತೀವ್ರತೆ ಈ ಸೆನ್ಸರ್ ಗೆ ತಟ್ಟುವುದಿಲ್ಲ. ಗಂಭೀರ ಅಪಘಾತ ಸಂಭವಿಸಿದರೂ ಈ ಏರ್ ಬ್ಯಾಗ್ ತೆರೆಯದೇ ಇದ್ದರೆ ಕಾರಿನ ಒಳಗಡೆ ಇರುವ ವ್ಯಕ್ತಿಗಳು ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.

Also Read  22 ವರ್ಷದ ಯುವಕನನ್ನು ಚಾಕುವಿನಿಂದ ಇರಿದು ಕೊಂದ ಅಪ್ರಾಪ್ತ ವಯಸಿನ ಹುಡುಗರು.!

ಬುಲ್ ಬಾರ್ ತೆರವಿಗೆ ರಾಜ್ಯ ಸರ್ಕಾರದ ಅಧಿಕಾರಿಗಳು ನಿಗದಿತ ಅವಧಿಯನ್ನು ಕಲ್ಪಿಸಿಕೊಡುತ್ತಾರೆ. ನಂತರದಲ್ಲಿಯೂ ವಾಹನಗಳಿಂದ ಬುಲ್ ಬಾರ್ ಗಳನ್ನು ತೆರವುಗೊಳಿಸದೇ ಇದ್ದರೆ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿ 1 ಸಾವಿರ ರೂ. ದಂಡ ವಿಧಿಸಬಹುದಾಗಿದ್ದು, ಎರಡನೇ ಬಾರಿ ಈ ಮೊತ್ತವನ್ನು 2 ಸಾವಿರಕ್ಕೆ ಹೆಚ್ಚಿಸಲಾಗುತ್ತದೆ. ಒಂದು ವೇಳೆ ವಾಹನದ ತಯಾರಕರು ಬುಲ್ ಬಾರ್ ಅಳವಡಿಸಿದ್ದರೆ ಹಾಗೂ ಬುಲ್ ಬಾರ್ ಗಳನ್ನು ಮಾರಾಟ ಮಾಡುವವರಿಗೆ 5 ಸಾವಿರ ರೂ ದಂಡ ವಿಧಿಸಬಹುದಾಗಿದೆ.

error: Content is protected !!
Scroll to Top