(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.26. ವಾಟ್ಸ್ ಆ್ಯಪ್ ಕಂಪನಿಯು ಹಳೆಯ ವಿಂಡೋಸ್, ಬ್ಲ್ಯಾಕ್‌ಬೆರಿ ಫೋನ್ ಬಳಕೆದಾರರಿಗೆ ಹೊಸ ವರ್ಷಕ್ಕೆ ಹೊಸ ಆಘಾತ ನೀಡಿದ್ದು, ಇನ್ಮುಂದೆ ವಾಟ್ಸಪ್ ನ್ನು ಸ್ಥಗಿತಗೊಳಿಸಲಿದೆ.
2017ರ ಡಿ.31ರಿಂದ ‘ಬ್ಲ್ಯಾಕ್‌ಬೆರಿ 10’ ಮತ್ತು ‘ವಿಂಡೋಸ್ ಫೋನ್ 8.0’, ‘ಆಂಡ್ರಾಯ್ಡ್ 4.0’ ಮತ್ತು ಅದಕ್ಕಿಂತಲೂ ಹಳೆಯದಾದ ಪ್ಲಾಟ್‌ಫಾರಂಗಳಿಗೆ ಸೇವೆ ಸ್ಥಗಿತಗೊಳಿಸಲು ವಾಟ್ಸ್‌ಆ್ಯಪ್ ನಿರ್ಧರಿಸಿದೆ. ‘ವಾಟ್ಸ್‌ಆ್ಯಪ್’ ಮಾತೃ ಸಂಸ್ಥೆ ‘ಫೇಸ್‌ಬುಕ್’ ಈ ವಿಷಯ ಖಚಿತಪಡಿಸಿದ್ದು, ಈ ಪ್ಲಾಟ್‌ಫಾರಂಗಳಲ್ಲಿ ಆ್ಯಪ್‌ನ ವೈಶಿಷ್ಟ್ಯಗಳನ್ನು ಹೆಚ್ಚಿಸಲು ಅಗತ್ಯ ಅವಕಾಶಗಳು ಇಲ್ಲವಾದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಗ್ರಾಹಕರು ಪರಿಷ್ಕೃತ ವಾಟ್ಸ್ ಆ್ಯಪ್ ಸೇವೆಯನ್ನು ಮುಂದುವರಿಸಬೇಕಾದರೆ ಹೊಸ ‘ಒಎಸ್’ ವರ್ಷನ್‌ಗೆ ಅಪ್‌ಗ್ರೇಡ್ ಆಗಬೇಕು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.