50 ಲಕ್ಷ ಮಿಸ್ ಕಾಲ್ ಲಭಿಸಿದ ಪಕ್ಷಕ್ಕೆ ಚುನಾವಣೆಯಲ್ಲಿ ಲಭಿಸಿದ್ದು 1417 ಮತಗಳು ► ಆರ್.ಕೆ ನಗರ ಉಪಚುನಾವಣೆ: ಬಿಜೆಪಿಯನ್ನು ಟ್ರೋಲ್ ಮಾಡಿದ ಜಿಗ್ನೇಶ್ ಮೇವಾನಿ

(ನ್ಯೂಸ್ ಕಡಬ) newskadaba.com ಅಹ್ಮದಾಬಾದ್, ಡಿ.25. ತಮಿಳುನಾಡಿನ ಆರ್.ಕೆ.ನಗರದ ಉಪ ಚುನಾವಣೆಯಲ್ಲಿ ಬಿಜೆಪಿ ಪಡೆದಿರುವ 1417 ಮತಗಳನ್ನು ಲೇವಡಿ ಮಾಡಿರುವ ದಲಿತ ನಾಯಕ‌, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ವಿಶ್ವದ ಅತೀ ದೊಡ್ಡ ಮಿಸ್ ಕಾಲ್ ಪಕ್ಷವನ್ನು ತಮಿಳುನಾಡಿನಲ್ಲಿ ನೋಟಾ ಹಿಂದಿಕ್ಕಿದೆ ಎಂದು ವ್ಯಂಗವಾಡಿದರು.

ಆರ್.ಕೆ ನಗರದ ಉಪಚುನಾವಣೆ ಫಲಿತಾಂಶದ ಬಳಿಕ ಜಿಗ್ನೇಶ್ ಮೇವಾನಿ ಟ್ವಿಟರ್ ನಲ್ಲಿ ಬಿ.ಜೆ.ಪಿ ಯನ್ನು ವ್ಯಂಗ್ಯವಾಡುತ್ತಾ, ವಿಶ್ವದ ಅತೀ ದೊಡ್ಡ ಮಿಸ್ ಕಾಲ್ ಪಕ್ಷವಾಗಿರುವ ಬಿ.ಜೆ.ಪಿ ಗೆ ತಮಿಳುನಾಡಿನಲ್ಲಿ 50 ಲಕ್ಷಕ್ಕೂ ಅಧಿಕ ಮಿಸ್ ಕಾಲ್ ಗಳು ಲಭಿಸಿದೆ. ಆದರೆ ಅವರಿಗೆ ಆರ್.ಕೆ. ನಗರ ಉಪಚುನಾವಣೆಯಲ್ಲಿ ಕೇವಲ 1417 ಮತಗಳು ಲಭಿಸಿದೆ. 2373 ಮತಗಳನ್ನು ಪಡೆದ ನೋಟಾ ಬಿಜೆಪಿಯನ್ನು ಹಿಂದಿಕ್ಕಿದೆಯೆಂದು ಟ್ವೀಟ್ ಮಾಡಿದ್ದಾರೆ. ಜಯಲಲಿತಾರ ಕ್ಷೇತ್ರವಾಗಿದ್ದ ಆರ್.ಕೆ ನಗರದ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಿನಕರನ್ ಭರ್ಜರಿ ಗೆಲುವು ಸಾಧಿಸಿದ್ದರು.

Also Read  ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ - ದ್ವಿಚಕ್ರ, ತ್ರಿಚಕ್ರ ಸೇರಿ ಈ ವಾಹನಗಳ ಸಂಚಾರ ನಿಷೇಧ

error: Content is protected !!
Scroll to Top