ಮಹಿಳೆ ಮೇಲೆ ಅತ್ಯಾಚಾರ‌ ಆರೋಪ ➤ ಅವಳಿ ಸಹೋದರರ ತಲೆ ಬೋಳಿಸಿ ಮೆರವಣಿಗೆ ಮಾಡಿದ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com. ಮಹಾರಾಷ್ಟ್ರ.  ಫೆ.11. ವಿಜಯಪುರದಲ್ಲಿ   ಮಹಿಳೆ ಮೇಲೆ ಅತ್ಯಾಚಾರ‌ಕ್ಕೆ ಯತ್ನಿಸಿದ ಕಾರಣಕ್ಕಾಗಿ, ತಾಲೂಕಿನ ಹೆಗಡಿಹಾಳ ತಾಂಡಾದಲ್ಲಿ  ಅವಳಿ ಸಹೋದರಾರ ಪೀರು ಹಾಗೂ ರಾಜು ತಲೆ ಬೋಳಿಸಿ ತಲೆಗೆ ಸುಣ್ಣ ಬಳಿದು, ಕೊರಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳಾದ ಗ್ರಾ.ಪಂ.ಅಧ್ಯಕ್ಷ ರಾಮಸಿಂಗ್ ಲಮಾಣಿ, ಅನಿಲ್​ ಲಮಾಣಿ, ಮಂಗೇಶ್, ಹೇಮು, ರಾಜು, ಚನ್ನು ಹಾಗೂ ರಮೇಶ್​ನನ್ನು ಇದೀಗ ವಿಜಯಪುರ ಗ್ರಾಮೀಣ ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 504, 506 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Scroll to Top