ಗರ್ಭಿಣಿ ಪತ್ನಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ಮದ್ಯ ವ್ಯಸನಿ ಪತಿ.!!

crime, arrest, suspected

(ನ್ಯೂಸ್ ಕಡಬ)newskadaba.com  ಉತ್ತರ ಪ್ರದೇಶ, ಜ.15. ಮದ್ಯವ್ಯಸನಿ ಪತಿ ತನ್ನ ಕುಡಿಯುವ ಚಟವನ್ನು ವಿರೋಧಿಸಿದ್ದಕ್ಕೆ ಗರ್ಭಿಣಿಯಾಗಿದ್ದ ಪತ್ನಿಯನ್ನು ತನ್ನ ಮೋಟಾರ್‌ ಬೈಕ್‌ಗೆ ಕಟ್ಟಿ 200 ಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಘುಂಗ್‌ಚೈ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ರಾಮ್‌ಗೋಪಾಲ್‌ನನ್ನು ಬಂಧಿಸಲಾಗಿದೆ. ಪತ್ನಿ ಸುಮನ್‌ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವರದಿಗಳ ಪ್ರಕಾರ, ರಾಮ್ ಗೋಪಾಲ್ ಕುಡಿದು ಮನೆಗೆ ಬಂದಾಗ, ಸುಮನ್ ಇದನ್ನು ವಿರೋಧಿಸಿದ್ದಾರೆ. ಇದರಿಂದ ಕೋಪಗೊಂಡ ರಾಮ್, ಮೊದಲು ಆಕೆಯನ್ನು ಥಳಿಸಿ ನಂತರ ಬೈಕ್‌ಗೆ ಕಟ್ಟಿಹಾಕಿ ಬೈಕ್ ಓಡಿಸಿದ್ದಾನೆ. ದಾರಿಹೋಕರು ರಾಮ್ ಗೋಪಾಲ್ ಅವರನ್ನು ತಡೆಯಲು ಪ್ರಯತ್ನಿಸಿದರಾದರೂ, ಆತ ಅವರ ಮಾತು ಕೇಳಲು ನಿರಾಕರಿಸಿದ್ದಾನೆ. ಕೊನೆಗೆ ಸುಮನ್ ಸಹೋದರ ತನ್ನ ಸೋದರಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ರಾಮ್ ಗೋಪಾಲ್ ಮತ್ತು ಸುಮನ್ ಮೂರು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಮದುವೆಯಾದ ಕೆಲ ದಿನಗಳಲ್ಲೇ ಪತಿ ಡ್ರಗ್ಸ್ ಚಟಕ್ಕೆ ಬಿದ್ದಿದ್ದನು ಎಂದು ಸುಮನ್ ಆರೋಪಿಸಿದ್ದಾರೆ.

Also Read  ನಟ ದರ್ಶನ್ ರನ್ನು ಬೇರೆಡೆ ಸ್ಥಳಾಂತರಿಸುವಂತೆ ಸಿಎಂ ಸೂಚನೆ

 

error: Content is protected !!
Scroll to Top