ಉದ್ಘಾಟನೆಗೂ ಮುನ್ನವೇ ವಂದೇ ಭಾರತ್ ರೈಲಿಗೆ ಕಲ್ಲೆಸೆದ ಕಿಡಿಗೇಡಿಗಳು..!  



(ನ್ಯೂಸ್ ಕಡಬ) newskadaba.com  ಆಂಧ್ರ ಪ್ರದೇಶ, ಜ.12.   ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲೇಟು ಬಿದ್ದಿದ್ದು, ಬೋಗಿಗಳಿಗೆ ಹಾನಿಯಾಗಿದೆ. ಪ್ರಧಾನಿ ಮೋದಿ ಈ ರೈಲನ್ನು ಜನವರಿ 19 ರಂದು ಗ್ರೀನ್‌ ಸಿಗ್ನಲ್‌ ನೀಡಬೇಕಿತ್ತು. ಆದರೆ, ಉದ್ಘಾಟನೆಗೂ ಮುನ್ನವೇ ಈ ರೀತಿ ಕಿಡಿಗೇಡಿಗಳು ಕಲ್ಲೆಸೆದಿರುವ ಘಟನೆ ನಡೆದಿದೆ.







ಟ್ರಯಲ್‌ ರನ್‌ ಮುಗಿಸಿ ಮರ್ರಿಪೇಲಂನಿಂದ ವಿಶಾಖಪಟ್ಟಣ ರೈಲ್ವೆ ಸ್ಟೇಷನ್‌ಗೆ ವಂದೇ ಭಾರತ್‌ ಟ್ರೈನ್‌ ಹೋಗುವಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ರೈಲಿನ ಒಂದು ಬೋಗಿಯ ಗಾಜಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.






 

ಈ ಘಟನೆ ಸಂಬಂಧ ಮಾಹಿತಿ ನೀಡಿದ ವಿಭಾಗೀಯ ರೈಲ್ವೆ ಮ್ಯಾನೇಜರ್‌ ಅನೂಪ್‌ ಕುಮಾರ್ ಸೇತುಪತಿ ವಿಶಾಖಪಟ್ಟಣ ರೈಲ್ವೆ ಸ್ಟೇಷನ್‌ನಿಂದ ಕೋಚಿಂಗ್ ಕಾಂಪ್ಲೆಕ್ಸ್‌ಗೆ ವಂದೇ ಭಾರತ್‌ ರೈಲು ಹೋಗುತ್ತಿದ್ದಾಗ ಅಪರಿಚಿತ ಸಮಾಜ ವಿರೋಧಿ ಕೆಲಸ ಮಾಡುವ ಕಿಡಿಗೇಡಿಗಳು ಕಲ್ಲು ಹೊಡೆಯುವ ಮೂಲಕ ರೈಲಿಗೆ ಹಾನಿ ಮಾಡಿದ್ದಾರೆ. ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ ಹಾಗೂ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದೂ ತಿಳಿಸಿದ್ದಾರೆ.

 

error: Content is protected !!
Scroll to Top