8 ವರ್ಷಗಳ ನಂತರ ಇಬ್ಬರು ನಟರ ಸಿನಿಮಾ ಒಂದೇ ದಿನ ರಿಲೀಸ್ ➤ ಪೋಸ್ಟರ್ ಹರಿದು ಬಡಿದಾಡಿಕೊಂಡ ವಿಜಯ್-ಅಜಿತ್ ಫ್ಯಾನ್ಸ್..!!

(ನ್ಯೂಸ್ ಕಡಬ) newskadaba.com ಚೆನ್ನೈ, ಜ.11.  ಎಂಟು ವರ್ಷಗಳ ನಂತರ ಅಜಿತ್ ಮತ್ತು ಥಳಪತಿ ವಿಜಯ್ ನಟನೆಯ ಚಿತ್ರಗಳು ಮುಖಾಮುಖಿ ಆಗುತ್ತಿವೆ. ಹಾಗಾಗಿ ಸಹಜವಾಗಿಯೇ ಸ್ಟಾರ್ ವಾರ್ ಕ್ರಿಯೇಟ್ ಆಗಿದೆ ಎಂದು ತಿಳಿದುಬಂದಿದೆ.

ಇಬ್ಬರೂ ಕಲಾವಿದರ ಅಭಿಮಾನಿಗಳು ಕೂಡ ಕಳೆದ ಹದಿನೈದು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವ ಮೂಲಕ ಜಗಳಕ್ಕೆ ನಾಂದಿ ಹಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿದ್ದ ಗಲಾಟೆ, ಇದೀಗ ನಿಜ ಸ್ವರೂಪ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ಅಜಿತ್ ಕುಮಾರ್‌ ನಟನೆಯ ‘ತುನಿವು’ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಸೃಷ್ಟಿಯಾಗಿತ್ತು. ಎಚ್. ವಿನೋದ್ ನಿರ್ದೇಶನದ ಈ ಸಿನಿಮಾವು ಜನವರಿ 11ರಂದು ತೆರೆಗೆ ಬಂದಿದೆ. ‘ವಾರಿಸು’ ಮತ್ತು ‘ತುನಿವು’ ತೆರೆಕಂಡಿರುವುದರಿಂದ ಬಾಕ್ಸ್ ಆಫೀಸ್‌ ಅಬ್ಬರ ಜೋರಾಗಿದೆ. ಅಜಿತ್ ನಟನೆಯ ‘ತುಣಿವು’ ಮತ್ತು ವಿಜಯ್ ನಟನೆಯ ‘ವಾರಿಸು’ ಸಿನಿಮಾ ಏಕಕಾಲಕ್ಕೆ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ. ರಿಲೀಸ್ ಆದ ಅಷ್ಟೂ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ ಎನ್ನಲಾಗಿದೆ. ಈ ಗೆಲುವನ್ನು ಸಂಭ್ರಮಿಸಬೇಕಿದ್ದ ಅಭಿಮಾನಿಗಳು, ಒಬ್ಬರಿಗೊಬ್ಬರು ಪೋಸ್ಟರ್ ಹರಿದುಕೊಂಡು ಕಿತ್ತಾಡಿದ್ದು, ಅಭಿಮಾನಿಗಳ ಈ ಅತಿರೇಕಕ್ಕೆ ಪೊಲೀಸರು ಲಾಠಿ ರುಚಿ ಕೂಡ ತೋರಿಸಿದ್ದಾರೆ ಎನ್ನಲಾಗಿದೆ. ಚೆನ್ನೈನ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದ್ದು, ಮೊದಲು ಅಜಿತ್ ಅಭಿಮಾನಿಗಳು ಪೋಸ್ಟರ್ ಹರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಈ ಸುದ್ದಿ ಹರಡಿ ಅಜಿತ್ ಅಭಿಮಾನಿಗಳು ಕೂಡ ಅದೇ ಕೆಲಸ ಮಾಡಲು ಮುಂದಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪೊಲೀಸರ ಮಧ್ಯ ಪ್ರವೇಶ ಮಾಡಿ ಲಾಠಿ ಚಾರ್ಜ್ ಮಾಡುವ ಮೂಲಕ ಮುಂದಾಗಬಹುದಾಗಿದ್ದ ಅನಾಹುತವನ್ನು ತಡೆದಿದ್ದಾರೆ ಎಂದು ತಿಳಿದು ಬಂದಿದೆ.

Also Read  ಈ ಮಂತ್ರ ಹೇಳುವುದರಿಂದ ನಿಮಗೆ ಮಂಗಳ ದೋಷ ಒಂದೇ ದಿನದಲ್ಲಿ ನಿವಾರಣೆ ಆಗುತ್ತದೆ ಕಷ್ಟಗಳು ಪರಿಹಾರ ಆಗುತ್ತದೆ

.

error: Content is protected !!
Scroll to Top