(ನ್ಯೂಸ್ ಕಡಬ) newskadaba.com ಲಕ್ನೋ, ಜ.11. ಬೈಕ್ ನಲ್ಲಿ ಸಾಹಸಮಯ ಸ್ಟಂಟ್ ಗಳ ಹುಚ್ಚಾಟ ಮೆರೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಯುವಕರನ್ನು ಪೊಲೀಸರ ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ಬಳಿ ವರದಿಯಾಗಿದೆ.
ಒಂದು ಬೈಕ್ ನಲ್ಲಿ 6 ಜನ, ಇನ್ನೆರೆಡು ಬೈಕ್ ನಲ್ಲಿ 4 ಜನ ಕಿರುಚುತ್ತಾ ಜಾಲಿ ಮಾಡುತ್ತಾ ಸಂಚರಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬರೇಲಿಯ ಡಿಯೋರಾನಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ವೈರಲ್ ಆದ ವಿಡಿಯೋವನ್ನು ಪರಿಶೀಲಿಸಿ ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.