ಆಳವಾದ ಕಮರಿಗೆ ಆಕಸ್ಮಿಕವಾಗಿ ಬಿದ್ದು ಮೂವರು ಯೋಧರು ಹುತಾತ್ಮ..!!

(ನ್ಯೂಸ್ ಕಡಬ) newskadaba.com ಜಮ್ಮು-ಕಾಶ್ಮೀರ ದಾವಣಗೆರೆ, ಜ. 11.  ಜಮ್ಮು-ಕಾಶ್ಮೀರದ ಗಡಿ ಜಿಲ್ಲೆಯ ಕುಪ್ವಾರದಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಹಿಮದಿಂದ ಆವೃತವಾದ ಮಚಿಲ್ ಸೆಕ್ಟರ್‌ನಲ್ಲಿ ಆಳವಾದ ಕಮರಿಗೆ ಆಕಸ್ಮಿಕವಾಗಿ ಬಿದ್ದು ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಸೇರಿದಂತೆ ಮೂವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಭಾರತೀಯ ಸೇನೆಯ ಜೆಸಿಒ ಮತ್ತು ಇತರ ಇಬ್ಬರು ರ್ಯಾಂಕ್ ದರ್ಜೆಯ ಸೈನಿಕರು ಮಚ್ಚಿಲ್ ಸೆಕ್ಟರ್‌ನಲ್ಲಿ ಬುಧವಾರ ನಸುಕಿನ ಜಾವ ಗಸ್ತು ತಿರುಗುತ್ತಿದ್ದಾಗ ಕಮರಿಗೆ ಆಕಸ್ಮಿಕವಾಗಿ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಕಸ್ಮಿಕವಾಗಿ ಆಳವಾದ ಕಮರಿಗೆ ಬಿದ್ದಿದ ಮೂವರು ಸೇನಾ ಯೋಧರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಟ್ವೀಟ್ ಮಾಡಿದೆ.

Also Read  ಕಾಸರಗೋಡು: ಯುವಕನ ಬರ್ಬರ ಹತ್ಯೆ

error: Content is protected !!
Scroll to Top