ಯುವತಿಯೋರ್ವಳಿಗೆ ಮರುಜೀವ ಕೊಟ್ಟ ನಟ ಅಕ್ಷಯ್ ಕುಮಾರ್

(ನ್ಯೂಸ್ ಕಡಬ) newskadaba.com ನವದೆಹಲಿ, ಜ.10. ಬಾಲಿವುಡ್​ ನಟ ಅಕ್ಷಯ್​ ಕುಮಾರ್ ಅವರ ಇತ್ತೀಚಿನ ಸಿನಿಮಾಗಳು ಯಾವುವೂ ಸರಿಯಾಗಿ ಕೈಹಿಡಿಯುತ್ತಿಲ್ಲ. ಆದರೆ ಅವರು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಸಂಕಷ್ಟದಲ್ಲಿ ಇರುವವರಿಗೆ ಸದಾ ನೆರವಾಗುವ ಅವರ ಗುಣದಿಂದಾಗಿ ಹಲವರ ಬಾಯಲ್ಲಿ ದೇವರು ಎನಿಸಿಕೊಂಡಿದ್ದಾರೆ ಅಕ್ಷಯ್​ ಕುಮಾರ್​.

 

ಇದೀಗ ಮತ್ತೆ ಹೃದಯವೈಶಾಲ್ಯತೆಯನ್ನು ನಟ ಮೆರೆದಿದ್ದಾರೆ. 25 ವರ್ಷದ ದೆಹಲಿಯ ಯುವತಿಗೆ ಮರುಜನ್ಮ ನೀಡಿದ್ದಾರೆ. ಆಯುಷಿ ಶರ್ಮಾ ಎನ್ನುವ ಯುವತಿಯ ಬಾಳಲ್ಲಿ ಹೊಸ ನಗು ತರಿಸಿದ್ದಾರೆ. ಮೊಮ್ಮಗಳ ಹೃದಯ ಕಸಿಗಾಗಿ ಹಣ ಹೊಂದಾಣಿಕೆ  ಮಾಡಲು ಪರದಾಡುತ್ತಿದ್ದ 80 ವರ್ಷದ ಹಿರಿಯ ಜೀವಕ್ಕೆ ಆಸರೆ ನೀಡಿದ್ದಾರೆ. ಆಯುಷಿ ಶರ್ಮಾ ಎಂಬ 25 ವರ್ಷದ ಯುವತಿಗೆ ಹುಟ್ಟಿನಿಂದಲೂ ಹೃದಯ ಸಮಸ್ಯೆ. ಆದರೆ ಇದು ಸರಿಹೋಗಬಹುದು ಎನ್ನುವ ಕಾರಣಕ್ಕೆ  ಔಷಧೋಪಚಾರ ಮಾಡುತ್ತಿದ್ದರು. ಆದರೆ ಆಯುಷಿಗೆ 25 ವರ್ಷ ಆಗುತ್ತಿದ್ದಂತೆಯೇ ಸಮಸ್ಯೆ ಉಲ್ಬಣಗೊಂಡಿತು. ವೈದ್ಯರ ಬಳಿ ಹೋದಾಗ ಆಕೆಯ ಹೃದಯ 25 ಪರ್ಸೆಂಟ್​ ಅಷ್ಟೇ ಕೆಲಸ ಮಾಡುತ್ತಿದೆ, ಹೀಗೆಯೇ ಬಿಟ್ಟರೆ ಜೀವಕ್ಕೆ ಅಪಾಯ. ಹೃದಯದ ಶಸ್ತ್ರಚಿಕಿತ್ಸೆ ಮಾಡಬೇಕು, ಹೃದಯದ ಕಸಿ ಮಾಡಬೇಕು ಎಂದಿದ್ದರು. ಇದಕ್ಕೆ ಏನಿಲ್ಲವೆಂದರೂ 50 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದಿದ್ದರು.

Also Read  ಕೃಷಿ, ನೀರಾವರಿಗೆ ಸರ್ಕಾರ ಆದ್ಯತೆ ➤ ಸಿಎಂ ಬೊಮ್ಮಾಯಿ

error: Content is protected !!
Scroll to Top