(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.12. ಬೆಂಗಳೂರಿನಿಂದ ಕಣ್ಣೂರಿನ ತಲಶ್ಶೇರಿಯತ್ತ ಪ್ರಯಾಣ ಬೆಳಿಸಿದ್ದ ಪ್ರವಾಸಿ ಬಸ್‌ವೊಂದು ನಿಯಂತ್ರಣ ತಪ್ಪಿ ನದಿಗೆ ಉರುಳಿದ ಘಟನೆ ಪೆರಿಂಗತ್ತೂರ್ ಎಂಬಲ್ಲಿ ಮಂಗಳವಾರದಂದು ನಡೆದಿದೆ.
ಈ ಅವಘಡದಲ್ಲಿ ಮಹಿಳೆ, ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಪೆರಿಂಗತ್ತೂರ್ ಎಂಬಲ್ಲಿನ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ನದಿಗೆ ಉರುಳಿದೆ. ಚಾಲಕ ಬಸ್‌ನಿಂದ ಜಿಗಿದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.