ಲಿಫ್ಟ್ ಕುಸಿದು ಬಿದ್ದು ➤ ಮೂವರು ಮೃತ್ಯು, ಓರ್ವನಿಗೆ ಗಾಯ..!!!

(ನ್ಯೂಸ್ ಕಡಬ) newskadaba.com ದೆಹಲಿ , ಜ.09.  ಗುಟ್ಕಾ ಕಾರ್ಖಾನೆಯಲ್ಲಿ ಲಿಫ್ಟ್ ಕುಸಿದ ಪರಿಣಾಮ ಮೂವರು ಮೃತಪಟ್ಟ ಹಾಗೂ ಓರ್ವ ಗಾಯಗೊಂಡ ಘಟನೆ ಪಶ್ವಿಮ ದೆಹಲಿಯ ನಾರಾಯಣ ಇಂಡಸ್ಟ್ರಿಯ ಪ್ರದೇಶದಲ್ಲಿ ವರದಿಯಾಗಿದೆ.

ಮೃತರನ್ನು ಕಾರ್ಖಾನೆಯ ಹೌಸ್ ಕೀಪಿಂಗ್ ಕೆಲಸ ಮಾಡುವ ಕುಲ್ವಾಂತ್ ಸಿಂಗ್ (30), ದೀಪಕ್ ಕುಮಾರ್ (26), ಸನ್ನಿ (33) ಎಂದು ಗುರುತಿಸಲಾಗಿದೆ. ಸುರಾಜ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ ಅವರನ್ನು ದೀನ್ ದಯಾಳ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Also Read  ಬೆಳ್ತಂಗಡಿ: ಓಮ್ನಿ ಹಾಗೂ ರಿಕ್ಷಾ ನಡುವೆ ಢಿಕ್ಕಿ ➤ ಪ್ರಯಾಣಿಕರಿಗೆ ಗಾಯ

ಫ್ಯಾಕ್ಟರಿಯಲ್ಲಿನ ಲಿಫ್ಟ್ ಈ ಹಿಂದೆ ಎರಡ್ಮೂರು ಬಾರಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಹೀಗಿದ್ದೂ ಅದನ್ನು ರಿಪೇರಿ ಮಾಡದೇ ಉಪಯೋಗಿಸುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಅದು ಮೇಲಿನಿಂದ ಕುಸಿದು ಬಿದ್ದಿದೆ ಎನ್ನಲಾಗಿದೆ.

error: Content is protected !!
Scroll to Top