ಕಾರು ಖರೀದಿದಾರರಿಗೆ ವರ್ಷಾಂತ್ಯದ ಆಫರ್ ► ಕೇವಲ ಒಂದು ರೂ. ನೀಡಿ ಟಾಟಾ ಕಾರು ಮನೆಗೊಯ್ಯುವ ಅವಕಾಶ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.11. ಈ ವರ್ಷ ಹೊಸ ಕಾರು ಖರೀದಿಸಲು ಯೋಜನೆ ರೂಪಿಸಿರುವವರಿಗೆ ಸಂತೋಷದ ವಿಷಯವೊಂದಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಭಾರತದ ಕಾರು ಖರೀದಿದಾರರಿಗೆ ವರ್ಷಾಂತ್ಯದ ಆಫರ್ ಮೂಲಕ ಕೇವಲ 1.00 ರೂ.ನಲ್ಲಿ ಕಾರನ್ನು ನೀಡಲು ಮುಂದಾಗಿದೆ.

ತನ್ನ ‘ಮೆಗಾ ಆಫರ್ ಮ್ಯಾಕ್ಸ್ ಸೆಲೆಬ್ರೇಷನ್ ಕ್ಯಾಂಪೇನ್’ ಅಡಿಯಲ್ಲಿ, ಖರೀದಿದಾರರು ಕೇವಲ ರೂ. 1.00 ನೀಡುವ ಮೂಲಕ ಟಾಟಾ ಕಾರನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ. ಕೇವಲ ಒಂದು ರೂಪಾಯಿ ಡೌನ್‌ಪೇಮೆಂಟ್ ಮಾಡುವ ಮೂಲಕ ಟಾಟಾ ಕಾರಿನ ಮೇಲೆ ರೂ.1 ಲಕ್ಷ ಉಳಿತಾಯ ಮಾಡುವ ಅವಕಾಶವನ್ನು ಪಡೆಯಬಹುದಾಗಿದೆ. ಭಾರತದ ಪ್ರಮುಖ ಹಣಕಾಸು ಮತ್ತು ಬ್ಯಾಂಕುಗಳೊಂದಿಗೆ ಕೈಜೋಡಿಸುವ ಮೂಲಕ ಟಾಟಾ ಮೋಟರ್ಸ್ ಕಂಪನಿಯು ಪ್ರಯಾಣಿಕರ ವಾಹನಗಳ ಮೇಲೆ ಶೇಕಡಾ 100% ರಷ್ಟು ಹಣಕಾಸು ಯೋಜನೆಗಳನ್ನು ನೀಡಲು ಮುಂದಾಗಿದೆ. ಇದಲ್ಲದೆ, ಟಾಟಾ ಮೋಟಾರ್ಸ್ ಕಂಪನಿಯು ತಮ್ಮ ಕಾರುಗಳ ಮೇಲೆ ವಿನಿಮಯ ಸೌಲಭ್ಯ ನೀಡಲೂ ಸಹ ಮುಂದಾಗಿದೆ. ಈ ಮೂಲಕ ಹೆಚ್ಚುವರಿ ಲಾಭಗಳನ್ನು ಆನಂದಿಸಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ.

Also Read  ವಿಕ್ರಮ್ ಗೌಡ ಎನ್ಕೌಂಟರ್ ನ್ಯಾಯಾಂಗ ತನಿಖೆಯಾಗಲಿ: ನಕ್ಸಲ್ ಪುನರ್ವಸತಿ ಸಮಿತಿಯ ಸದಸ್ಯರ ಆಗ್ರಹ

ಟಾಟಾ ಮೋಟರ್ಸ್ ಭಾರತದಲ್ಲಿ ತನ್ನ ಉತ್ಪನ್ನ ಶ್ರೇಣಿಯ ಕಾರುಗಳ ಮೂಲಕ ವ್ಯಾಪಕ ಜನಪ್ರಿಯತೆ ಹೊಂದಿದೆ. ಕಂಪನಿ ಈಗ ವರ್ಷಾಂತ್ಯದ ಮಾರಾಟದ ಲಾಭ ಪಡೆಯಲು ಟಾಟಾ ಮೋಟರ್ಸ್ ಮುಂದಾಗಿದ್ದು, ಒಂದು ರೂಪಾಯಿ ಕೊಟ್ಟು ಕಾರನ್ನು ಖರೀದಿಸಲು ಅವಕಾಶ ನೀಡಿದೆ.

error: Content is protected !!
Scroll to Top