2023 ಬಾಸ್ಮತಿ ಅಕ್ಕಿ , ತಾಳೆಎಣ್ಣೆ ಬೆಲೆಯಲ್ಲಿ ಹೆಚ್ಚಳ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜ. 04.  ದೇಶದಲ್ಲಿ ಬಾಸ್ಮತಿ ಅಕ್ಕಿ ಮತ್ತು ತಾಳೆಎಣ್ಣೆ ಬೆಲೆಗಳು ಹೆಚ್ಚಳ ಕಾಣಲಾರಂಭಿಸಿವೆ. ಕಳೆದ ಒಂದು ತಿಂಗಳಿನಲ್ಲಿ ಅಕ್ಕಿಯಲ್ಲಿ ಬೆಲೆ ಶೇ.15ರಷ್ಟು ಏರಿಕೆಯಾಗಿದೆ. ಮುಂಬರುವ ವಾರಗಳಲ್ಲಿ ತಾಳೆ ಎಣ್ಣೆ ಬೆಲೆ ಪ್ರತೀ ಲೀಟರ್ ಗೆ 5 ರಿಂದ 7ರೂ. ಹೆಚ್ಚುವ ಸಾಧ್ಯತೆಗಳಿವೆ.

ಬಾಸ್ಮತಿ ಅಕ್ಕಿಗೆ ಪ್ರತೀ ಕೆ.ಜಿ.ಗೆ ತಿಂಗಳ ಹಿಂದೆ 95 ರೂ. ಇದದ್ದು ಈಗ ದಾಖಲೆಯ 110 ರೂ ತಲುಪಿದೆ. ಗಿರಣಿ ಮಾಲಕರು ಮತ್ತು ಮಾರಾಟಗಾರರು ಅಕ್ಕಿ ದಾಸ್ತಾನು ಮಾಡಿಕೊಳ್ಳುತ್ತಿರುವುದರಿಂದ  ಬೆಲೆ ಹೆಚ್ಚಳ ಕಂಡುಬಂದಿದೆ ಎನ್ನಲಾಗಿದೆ. ಖಾರಿಪ್ ಋತುವಿನಲ್ಲಿ ಉತ್ಪಾದನೆ ಕುಸಿತ, ನೇಪಾಲಕ್ಕೆ ಭತ್ತ ರಪ್ತು ಮಾಡುವುದರಿಂದ ಇತರ ಅಕ್ಕಿಗಳಿಗೂ ಬೆಲೆ ಹೆಚ್ಚಲಿದೆ ಎನ್ನಲಾಗಿದೆ.

Also Read  ಮದುವೆಗೆ ಒಪ್ಪದ ಮಗಳನ್ನೇ 1ಲಕ್ಷ ರೂ.ಗೆ ಮಾರಿದ ಪೋಷಕರು..!

error: Content is protected !!
Scroll to Top