ಕೊನೆಗೂ ಭಾರತದಲ್ಲಿ ಬಿಡುಗಡೆಯಾಯ್ತು ಬಹು ನಿರೀಕ್ಷಿತ ಬೈಕ್ ► ಟಿವಿಎಸ್ ಅಪಾಚಿ ಆರ್ ಆರ್ 310

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.08. ಟಿವಿಎಸ್ ಮೋಟಾರ್ ಕಂಪನಿಯ ಬಹು ನಿರೀಕ್ಷಿತ ಬೈಕ್ ಗಳಲ್ಲಿ ಒಂದಾದ ಅಪಾಚಿ ಆರ್ ಆರ್ 310 ಮೋಟಾರ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಸ್ಪೋರ್ಟ್ಸ್ ಬೈಕ್ ಮಾದರಿಯ ಆರ್ ಆರ್ 310 ಫೋರ್ ಸ್ಟ್ರೋಕ್, ಫೋರ್ ವ್ಯಾಲ್ಯು, ಸಿಂಗಲ್ ಸಿಲಿಂಡರ್ ಗಳನ್ನು ಒಳಗೊಂಡಿರಲಿದೆ.‌ 312 ಸಿಸಿ ಇಂಜಿನ್ ಸಾಮರ್ಥ್ಯದ ಈ ಬೈಕ್ 33.5 ಬಿಎಚ್ ಪಿ ಒಳಗೊಂಡಿದೆ. 9700 ಆರ್ ಪಿಎಂ ಮತ್ತು 27.3 ಎನ್ ಎಂ ಒಳಗೊಂಡಿದೆ. ಎಲ್ ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಹೊಂದಿರುವ ಈ ಬೈಕ್ ನ ಎಕ್ಸ್ ಷೋರೂಂ ಬೆಲೆ 2 ಲಕ್ಷ ರೂ.ಗಳಷ್ಟಿದೆ. ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಗಿಂತ ಅತಿ ಹೆಚ್ಚಿನ ಟಾಪ್ ಸ್ಪೀಡ್ ಅಂದರೆ 163 KMPH ಹೊಂದಿದೆ.

Also Read  ಪತಿಯ ಕಿರುಕುಳಕ್ಕೆ ಪತ್ನಿ ಆತ್ಮಹತ್ಯೆ...! ದೂರು ದಾಖಲು

ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಬೈಕ್ ನ ವಿನ್ಯಾಸವನ್ನು ಮಾಡಲಾಗಿದ್ದು, ಈ ಬೈಕ್ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಸಂಚಲನವನ್ನು ಮೂಡಿಸಲಿದೆ ಎಂದು ಹೇಳಲಾಗುತ್ತಿದೆ.

error: Content is protected !!
Scroll to Top