ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು 1100 ಕಿ.ಮೀ ದೂರ ಸೈಕಲ್ ನಲ್ಲಿ ಪ್ರಯಾಣಿಸಿದ ಅಭಿಮಾನಿ!

(ನ್ಯೂಸ್ ಕಡಬ) newskadaba.com .  ಮುಂಬೈ, ಜ. 03.  ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ಮಧ್ಯಪ್ರದೇಶದ ಜಬಲ್‌ಪುರದ ಅಭಿಮಾನಿಯೊಬ್ಬರು ಭೇಟಿ ಮಾಡಿದ್ದು, ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಸೈಕಲ್‌ ಮೂಲಕ 1100 ಕಿಮೀ ಕ್ರಮಿಸಿ ಮುಂಬೈಗೆ ಆಗಮಿಸಿದ ಅಭಿಮಾನಿಯ ಪ್ರೀತಿಗೆ ನಟ ಫುಲ್ ಫಿದಾ ಆಗಿದ್ದರು.

ಜಬಲ್‌ಪುರದ ನಿವಾಸಿ ಸಮೀರ್ ಎಂಬುವವರು ಮೆಗಾಸ್ಟಾರ್ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಲು ಮುಂಬೈಗೆ 1100 ಕಿಮೀ ಸೈಕಲ್‌ನಲ್ಲಿ ಬಂದಿದ್ದಾರೆ ಎಂದು ತಿಳಿದುಬಂದಿದೆ.

Also Read  ತನ್ನೆಲ್ಲಾ ನಿಯಮಗಳನ್ನು ಅಪ್ಡೇಟ್ ಮಾಡಿದ ವಾಟ್ಸ್ ಆಪ್ ➤ ಒಪ್ಪದೇ ಇದ್ದಲ್ಲಿ ಅಕೌಂಟ್ ಡಿಲೀಟ್

ದಬಾಂಗ್ನಟನೊಂದಿಗಿರುವ ಅಭಿಮಾನಿಯ ಚಿತ್ರ ಸದ್ಯ ವೈರಲ್ ಆಗುತ್ತಿದ್ದು, ಅವರ ಸೈಕಲ್‌ನಲ್ಲಿರುವ ಬೋರ್ಡ್‌ನಲ್ಲಿ, ‘ಚಲೋ ಉಂಕೋ ದುವಾಯೇ ದೇತೇ ಚಲೇ. ಜಬಲ್‌ಪುರದಿಂದ ಮುಂಬೈ, ದೀವಾನಾ ಮೈ ಚಲಾಎಂದು ಬರೆಯಲಾಗಿದೆ ಎನ್ನಲಾಗಿದೆ. ಹುಟ್ಟುಹಬ್ಬದಂದು ಸಲ್ಮಾನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ, ತಮ್ಮ ಅಭಿಮಾನಿಗಳತ್ತ ಕೈಬೀಸುವ ಚಿತ್ರವನ್ನು ಹಂಚಿಕೊಂಡಿದ್ದು, “ಎಲ್ಲರಿಗೂ ಧನ್ಯವಾದಗಳು” ಎಂದು ಬರೆದಿದ್ದಾರೆ ಎಂದು ವರದಿ ತಿಳಿಸಿದೆ.

error: Content is protected !!
Scroll to Top