15 ನೇ ವಯಸ್ಸಿಗೆ ಮನೆ ಖರೀದಿಸಿದ ಬಾಲನಟಿ ರುಹಾನಿಕಾ ಧಮನ್…!

(ನ್ಯೂಸ್ ಕಡಬ) newskadaba.com ಮುಂಬೈ, ಜ.02.  ಹಿಂದಿ ಧಾರವಾಹಿಗಳಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡಿರುವ ಬಾಲಕಿಯೋರ್ವಳು ತನ್ನ 15ನೇ ವಯಸ್ಸಿಗೆ ಸ್ವತಃ ಮನೆಯೊಂದನ್ನು ಖರೀದಿ ಮಾಡಿ ಎಲ್ಲರನ್ನು ಹುಬ್ಬೇರುವಂತೆ ಮಾಡಿರುವ ಘಟನೆ ಮುಂಬೈನಲ್ಲಿ ವರದಿಯಾಗಿದೆ.

ಬಾಲನಟಿಯಾಗಿ ಸ್ಟಾರ್ ಪ್ಲಸ್ ನ ಶೋ ‘ಯೇ ಹೈ ಮೊಹಬ್ಬತೇನ್’ ಮೂಲಕ ಖ್ಯಾತಿ ಗಳಿಸಿಕೊಂಡಿದ್ದ ರುಹಾನಿಕಾ ಧಮನ್, ತಮ್ಮ ಇನ್ ಸ್ಟಾ ಪೋಸ್ಟ್ ನಲ್ಲಿ ಸದಾ ಪ್ರೋತ್ಸಾಹ ನೀಡಿದ ತನ್ನ ಪೋಷಕರಿಗೆ ಧನ್ಯವಾದ ಹೇಳಿದ್ದಾರೆ. ‘ಇದು ಆರಂಭವಷ್ಟೇ, ನಾನು ಇನ್ನೂ ದೊಡ್ಡ ಕನಸು ಕಾಣುತ್ತಿದ್ದೇನೆ. ಇನ್ನೂ ಕಷ್ಟಪಟ್ಟು ಕೆಲಸ ಮಾಡಿ ಕನಸುಗಳನ್ನು ನನಸು ಮಾಡುತ್ತೇನೆ. ಆದ್ದರಿಂದ ಕನಸು ಕಾಣಿರಿ, ಮತ್ತು ನಿಮ್ಮ ಕನಸುಗಳನ್ನು ಬೆನ್ನಟ್ಟಿದ್ದಾಗ ಅವು ಖಂಡಿತವಾಗಿಯೂ ಒಂದಲ್ಲ ಒಂದು ನನಸಾಗುತ್ತವೆ’ ಎಂದು ಬರೆದುಕೊಂಡಿದ್ದಾರೆ.

Also Read  ರಾಗಿಣಿ-ಸಂಜನಾಗೆ ಇನ್ನೆರಡು ದಿನ ಜೈಲೇ ಫಿಕ್ಸ್​​

error: Content is protected !!
Scroll to Top