ಕಡಬ: ನಾಟಿವೈದ್ಯ, ಮುಟ್ಟಾಳ ತಯಾರಕ ಕಾಂತಪ್ಪ ಕಲ್ಲುಗುಡ್ಡೆ ನಿಧನ

(ನ್ಯೂಸ್‌ ಕಡಬ) newskadaba.com ಮಾ. 16. ಅಸೌಖ್ಯದಿಂದಿದ್ದ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಪ್ಪೆಜಕ್ಕೆಲ್ ನಿವಾಸಿ ಕಾಂತಪ್ಪ ಕಲ್ಲುಗುಡ್ಡೆ (63) ಅವರು ಮಾ.15ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

 

ಕಾಂತಪ್ಪ ಅವರು ಕಟ್ಟಡ ಕಾರ್ಮಿಕರಾಗಿದ್ದು, ಅಡಿಕೆ ಹಾಳೆಯಲ್ಲಿ ಮುಟ್ಟಾಳೆ ಕಟ್ಟುವ ಕಾಯಕವನ್ನೂ ಮಾಡುತ್ತಿದ್ದರು. ನಾಟಿ ವೈದ್ಯರೂ ಗಿದ್ದ ಅವರು ಮೂಲವ್ಯಾಧಿ  ಹಾಗೂ ಹಲ್ಲು ನೋವಿಗೆ ಔಷಧಿಯನ್ನು ನೀಡುತ್ತಿದ್ದರು.

 

ಮೃತರು ಪತ್ನಿ ಸೇಸಮ್ಮ, ಪುತ್ರಿಯರಾದ ಪೂರ್ಣಿಮಾ, ಪುಷ್ಪಾ, ಭವಿತಾ, ಪುತ್ರರಾದ ಪ್ರಸಾದ್, ನಿತಿನ್, ಸಹೋದರರಾದ ದೈವ ನರ್ತಕ ಕಿಟ್ಟು ಕೆ., ಕಡಬ ಉಪ ತಹಶಿಲ್ದಾರ್ ಗೋಪಾಲ ಕೆ., ಶಿಕ್ಷಕರಾದ ಆನಂದ ಅಜಿಲ, ರಾಮಕೃಷ್ಣ, ಸಹೋದರಿಯರಾದ ನೀಲು, ರಾಮಕ್ಕ, ಸುಂದರಿ ಹಾಗೂ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

Scroll to Top