2022ರ ಅತ್ಯುತ್ತಮ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ರಿಷಬ್ ಪಂತ್

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 02. ಈ ವರ್ಷದ ಅತ್ಯುತ್ತಮ ಆಟಗಾರರ ಹೆಸರನ್ನು ಬಿಸಿಸಿಐ ಪ್ರಕಟಿಸಿದ್ದು, ಕಳೆದ ವಾರ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಬ್ ಪಂತ್ ಅವರೂ ಅತ್ಯುತ್ತಮ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಬಿಸಿಸಿಐ ಆಟಗಾರರ ಪಟ್ಟಿಯನ್ನು ಟ್ವೀಟ್ ಮೂಲಕ ಪ್ರಕಟಿಸಿದೆ.

ಜಸ್ಪ್ರೀತ್ ಬುಮ್ರಾ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದರೆ, ರಿಷಬ್ ಪಂತ್ ಅತಿ ಹೆಚ್ಚು ರನ್ ಗಳಿಸಿದ್ದಾರೆ ಎಂದು ಬಿಸಿಸಿಐ ಶ್ಲಾಘಿಸಿದೆ. 7 ಟೆಸ್ಟ್ ಗಳ 12 ಇನ್ನಿಂಗ್ಸ್ ಗಳಲ್ಲಿ 62 ಸರಾಸರಿಯಲ್ಲಿ 680 ರನ್, 4 ಶತಕ ಹಾಗೂ 2 ಅರ್ಧ ಶತಕ ಪಂತ್ ಸಾಧನೆಯಾದರೆ, 5 ಟೆಸ್ಟ್ ಗಳಲ್ಲಿ 20 ಸರಾಸರಿಯಲ್ಲಿ 22 ವಿಕೆಟ್‌ ಪಡೆದಿರುವುದು ಬುಮ್ರಾ ಸಾಧನೆ. ಬುಮ್ರಾ 2 ಬಾರಿ 5 ವಿಕೆಟ್ ಪಡೆದು, 24 ರನ್‌ ಗಳಿಗೆ 5 ವಿಕೆಟ್ ಬೀಳಿಸಿದ್ದು, ಅವರ ಸಾಧನೆ ಎಂದು ಬಿಸಿಸಿಐ ಹೇಳಿದೆ.

Also Read  ದೇಶದಲ್ಲಿ 4ವರ್ಷಗಳಲ್ಲೆ ಚಿನ್ನದ ದರ ಅತೀ ಕಡಿಮೆ

error: Content is protected !!
Scroll to Top