(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.04. ಐಕ್ಯತೆ ಬಯಸಿ ಒಂದಾಗುವತ್ತ ಹೆಜ್ಜೆ ಹಾಕಿರುವ ಮುಸ್ಲಿಂ ಸುನ್ನೀ ಸಂಘಟನೆಗಳು ಇಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿತು.
ಒಂದೇ ತತ್ವಾದರ್ಶಗಳೊಂದಿಗೆ ಗುರುತಿಸಿಕೊಂಡಿರುವ ಮುಸ್ಲಿಂ ಸುನ್ನಿ ಸಂಘಟನೆಗಳಾದ SSF ಮತ್ತು SKSSF ಮುಖಂಡರ ಮಹತ್ವದ ಸಭೆಯಲ್ಲಿ ಸಮುದಾಯದ ಸಮಸ್ಯೆಗಳ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಗಂಭೀರ ಚರ್ಚೆ ನಡೆದಿದೆಯೆನ್ನಲಾಗಿದ್ದು, ಈ ಸಭೆಯಲ್ಲಿ ಎಪಿ ಮತ್ತು ಇಕೆ ಬಣದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು. ಸಭೆಯ ಬಗ್ಗೆ ಗೌಪ್ಯತೆ ಕಾಪಾಡಿಕೊಂಡ ಉಭಯ ಸಂಘಟನೆಗಳ ನಾಯಕರು ಕರ್ನಾಟಕದಲ್ಲಿ ಮದ್ರಸಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಠ್ಯಪುಸ್ತಕ ರಚಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.