‘ಓಖೀ’ ಚಂಡಮಾರುತಕ್ಕೆ ತುತ್ತಾದ ಹಲವರು ಸಂಕಷ್ಟದಲ್ಲಿ ► ಮಂಗಳೂರಿನಿಂದ ಹೊರಟಿದ್ದ ಎರಡು ಹಡಗುಗಳು ಮುಳುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.01. ಮಂಗಳೂರಿನಿಂದ ಲಕ್ಷ ದ್ವೀಪಕ್ಕೆ ಹೊರಟಿದ್ದ ಸರಕು ಸಾಗಾಟದ ಎರಡು ಹಡಗುಗಳ ಪೈಕಿ ಒಂದು ಸಣ್ಣ ಹಡಗು ಅರಬ್ಬಿ ಸಮುದ್ರದಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದು, ಇನ್ನೊಂದು ಭಾಗಶಃ ಮುಳುಗಡೆಯಾಗಿದ ಘಟನೆ ಶುಕ್ರವಾರದಂದು ನಡೆದಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ಓಖೀ ಚಂಡಮಾರುತದಿಂದಾಗಿ ಇದೀಗ ಕರವತ್ತಿ ದ್ವೀಪದಲ್ಲಿ ಸಂಚರಿಸುತ್ತಿದ್ದ ಸರಕು ಸಾಗಾಟದ ಹಡಗುಗಳು ಮುಳುಗಡೆಯಾಗಿವೆ‌. ಘಟನೆಯಲ್ಲಿ ಎರಡೂ ಹಡಗುಗಳಲ್ಲಿರುವ ಸುಮಾರು 15 ಮಂದಿ ಅಪಾಯದಲ್ಲಿದ್ದು, ಐವರನ್ನು ರಕ್ಷಿಸಲಾಗಿದೆ. ಮುಳುಗಡೆಗೊಂಡಿರುವ ಹಡಗಿನಲ್ಲಿದ್ದ ಸಿಬ್ಬಂದಿಗಳ ಪೈಕಿ ಕೆಲವರು ನೀರು ಪಾಲಾಗಿದ್ದಾರೆ ಎಂದೂ ಹೇಳಲಾಗುತ್ತಿದೆ.

Also Read  ಮಿಸ್ಡ್ ಕಾಲ್‌ನಿಂದ ಸಿಕ್ಕಿಬಿದ್ದ 11 ವರ್ಷದ ಬಾಲಕಿಯ ಕೊಲೆಗಾರ !!      

error: Content is protected !!
Scroll to Top