ಪಾಟ್ನಾ ಕಳ್ಳ ಬಟ್ಟಿ ದುರಂತ ➤ ಐವರು ಮೃತ್ಯು

(ನ್ಯೂಸ್‌ ಕಡಬ) newskadaba.com ಬಿಹಾರ, ಡಿ. 17. ಬಿಹಾರದ ಸಿವಾನ್ ಜಿಲ್ಲೆಯಲ್ಲಿ ವಿಷಪೂರಿತ ಮದ್ಯ ಸೇವಿಸಿ ಐದು ಮಂದಿ ಮೃತಪಟ್ಟ ಘಟನೆ ನಡೆದಿದೆ.

ಮೃತರೆಲ್ಲರು ಭಗವಾನ್ ಪುರ ಹಾತ್ ಪೊಲೀಸ್ ಠಾಣೆ ವ್ಯಾಪ್ತಿಯ ಬ್ರಹ್ಮಸ್ಥಾನ ಮತ್ತು ಸೊಂಧನಿ ಗ್ರಾಮದವರು ಎಂದು ತಿಳಿದು ಬಂದಿದೆ. ಈ ಅವಘಡದಲ್ಲಿ ಐವರು ಮೃತಪಟ್ಟಿದ್ದು, ಶಿವಕುಮಾರ್ (25) ಮತ್ತು ದೀಪಕ್ (15) ಚಿಕ್ಕಿತ್ಸೆ ಪಡೆಯುತ್ತಿದ್ದಾರೆ. ಎರಡು ರಾಸಾಯನಿಕ ಬಾಟಲಿಗಳನ್ನು ವಶಪಡಿಸಿಕೊಂಡು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

Scroll to Top