ಸುಳ್ಯ: ಕಾರು, ಲಾರಿ ಹಾಗೂ ಬೈಕ್ ನಡುವೆ ಸರಣಿ ಅಪಘಾತ ➤ ಸವಾರ ಗಂಭೀರ



(ನ್ಯೂಸ್ ಕಡಬ) newskadaba.com ಅರಂತೋಡು, ಡಿ. 15. ಲಾರಿ, ಕಾರು ಹಾಗು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರು ಗಾಯಗೊಂಡ ಘಟನೆ ಸುಳ್ಳ-ಮೆಡಿಕೇರಿ ರಾಜ್ಯ ಹೆದ್ದಾರಿಯ ಪಾಲಡ್ಕ ಎಂಬಲ್ಲಿ ನಡೆದಿದೆ.







ಗಾಯಗೊಂಡ ಬೈಕ್ ಸವಾರರನ್ನು  ಪೆರಾಜೆ ಗ್ರಾಮದ ದೊಡ್ಡಡ್ಕ ದೀನರಾಜ್ ಹಾಗೂ ಕಂಜಿಪಿಲಿ ಪುರುಷೋತ್ತಮ ಎಂದು ಗುರುತಿಸಲಾಗಿದೆ. ಇನ್ನೊಂದೆಡೆ ಕಾರು, ಲಾರಿ ನಡುವೆ ಢಿಕ್ಕಿ ಸಂಭವಿಸಿದ್ದು, ಗಾಯಾಳುವನ್ನು ಸುಳ್ಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಬೈಕ್ ನ್ನು ಒವರ್ ಟೇಕ್ ಮಾಡಿ ಮುನ್ನುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಕುರಿತು ಸುಳ್ಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top