ಮಂಜೇಶ್ವರ ದ-ಅವಾ ಕಾಲೇಜು ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು ➤ ತಮಿಳುನಾಡಿನಲ್ಲಿ ದುರ್ಘಟನೆ

(ನ್ಯೂಸ್ ಕಡಬ) newskadaba.com ಉಪ್ಪಳ, ಡಿ. 15. ಮುತ್ತುಪೇಟೆಯಲ್ಲಿ ಸ್ನಾನಕ್ಕೆಂದು ನೀರಿಗಿಳಿದ ವೇಳೆ ಆಕಸ್ಮಿಕವಾಗಿ ಮುಳುಗಿ ಮಳ್ ಹರ್ ದಅವಾ ಕಾಲೇಜು ವಿದ್ಯಾರ್ಥಿ ಮೃತಪಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

 

ಮೃತ ವಿದ್ಯಾರ್ಥಿಯನ್ನು ಉಪ್ಪಳ ಪೈವಳಿಕೆ ನಿವಾಸಿ ಅನ್ಸಾಫ್ ಎಂದು ಗುರುತಿಸಲಾಗಿದೆ. ಮಂಜೇಶ್ವರದ ಮಳ್ ಹರ್ ದಅವಾ ಕಾಲೇಜಿನಲ್ಲಿ ಓದುತ್ತಿದ್ದ ಅನ್ಸಾಫ್ ಗೆಳೆಯರ ಜೊತೆ ಮುತ್ತುಪೇಟೆ ಝಿಯಾರತ್ ಗೆ ತೆರಳಿದ್ದು, ಝಿಯಾರತ್ ಬಳಿಕ ಸ್ನಾನಕ್ಕೆಂದು ನದಿಗಿಳಿದು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅನ್ಸಾಫ್ ನಿಧನಕ್ಕೆ ಮಳ್ ಹರ್ ದಾವಾ ಕಾಲೇಜು ಸಂತಾಪ ಸೂಚಿಸಿದೆ.

Scroll to Top