2023ರ ಐಪಿಎಲ್ ಆವೃತ್ತಿ ಹರಾಜಿಗೆ ಲಭ್ಯ ಆಟಗಾರರ ಪಟ್ಟಿ ಬಿಡುಗಡೆ ➤ ಡಿ. 23ರಂದು ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 14. ಐಪಿಎಲ್‌ 2023ರ ಆವೃತ್ತಿಯ ಹರಾಜಿಗೆ ಲಭ್ಯರಿರುವ 405 ಆಟಗಾರರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

ಆರಂಭದಲ್ಲಿ 991 ಆಟಗಾರರಿದ್ದ ಪಟ್ಟಿ ಸದ್ಯ 405ಕ್ಕೆ ಇಳಿದಿದೆ. ಇದರ ಪೈಕಿ 273 ಭಾರತೀಯರು ಮತ್ತು 132 ವಿದೇಶಿ ಆಟಗಾರರು ಇದ್ದಾರೆ. ಇದರ ಹರಾಜು ಪ್ರಕ್ರಿಯೆಯು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ. ಹರಾಜಿಗೆ ಲಭ್ಯರಿರುವ ಆಟಗಾರರಲ್ಲಿ ಅಫ್ಗಾನಿಸ್ತಾನದ ಸ್ಪಿನ್ನರ್‌, 15 ವರ್ಷದ ಅಲ್ಹಾ ಮೊಹಮ್ಮದ್‌ ಘಝನ್ಫರ್‌ ಅತ್ಯಂತ ಕಿರಿಯ ಎನಿಸಿಕೊಂಡಿದ್ದಾರೆ. 2007ರ ಜುಲೈ 15ರಂದು ಜನಿಸಿರುವ ಘಝನ್ಫರ್‌ ಈವರೆಗೆ ಮೂರು ಟಿ20 ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ. ಭಾರತದ, 40 ವರ್ಷದ ಅಮಿತ್‌ ಮಿಶ್ರಾ ಹರಾಜಿನಲ್ಲಿರುವ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

Also Read  ► ಇಂದಿನಿಂದ ಭಾರತ - ಆಸ್ಟ್ರೇಲಿಯಾ ಏಕದಿನ ಸರಣಿ

error: Content is protected !!
Scroll to Top