ಕೇಂದ್ರ ಸರಕಾರದ BIS ಗವರ್ನಿಂಗ್ ಬೋರ್ಡ್ ಸದಸ್ಯರಾಗಿ ಯು.ಟಿ.ಖಾದರ್

(ನ್ಯೂಸ್ ಕಡಬ) newskadaba.com ನವದೆಹಲಿ, ನ.21. ರಾಷ್ಟ್ರ ಮಟ್ಟದ ಗುಣಮಟ್ಟ ಮಾಪನ ಸಂಸ್ಥೆಯಾದ ಪ್ರತಿಷ್ಠಿತ BIS (Beauro of Indian Standard) ರಾಷ್ಟ್ರೀಯ ಗವರ್ನಿಂಗ್ ಬೋರ್ಡ್ ಕೌನ್ಸಿಲ್ ಸದಸ್ಯರಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್ ಅವರನ್ನು ಕೇಂದ್ರ ಸರಕಾರ ನೇಮಿಸಿ ಆದೇಶ ಹೊರಡಿಸಿದೆ.

ರಾಷ್ಟ್ರಮಟ್ಟದಲ್ಲಿ ಅಧ್ಯಕ್ಷರು ಸೇರಿ ಒಟ್ಟು 6 ಮಂದಿ ಸದಸ್ಯರಿರುವ ಬಿಐಎಸ್ ಸಂಸ್ಥೆಗೆ ದಕ್ಷಿಣ ಭಾರತದಿಂದ ಯು.ಟಿ.ಖಾದರ್ ನೇಮಕರಾಗಿದ್ದಾರೆ. ಕೇಂದ್ರ ಆಹಾರ ಸಚಿವರು ಇದರ ಅಧ್ಯಕ್ಷರಾಗಿದ್ದು, ಉಳಿದಂತೆ ಉತ್ತರ ಭಾರತದ ಮೂವರು ಸಚಿವರು, ಈರ್ವರು ಉನ್ನತ ಅಧಿಕಾರಿಗಳು ಸೇರಿದಂತೆ ಒಟ್ಟು ಐವರನ್ನು ಕೇಂದ್ರ ಸರಕಾರ ಆರಿಸಿದೆ.

ಆರೋಗ್ಯ ಇಲಾಖೆಯಂತೆ ಆಹಾರ ಇಲಾಖೆಯಲ್ಲೂ ಕರ್ನಾಟಕದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಅಮೂಲಾಗ್ರ ಬದಲಾವಣೆ ತಂದ ಸಚಿವ ಯು.ಟಿ.ಖಾದರ್ ಅವರನ್ನು ಕೇಂದ್ರದ ಬಿಜೆಪಿ ಸರಕಾರ ಆಯ್ಕೆ ಮಾಡಿದೆ.

Also Read  ಸಾವಿರಾರು ನೌಕರರನ್ನು ವಜಾ ಮಾಡಿದ ಮೈಕ್ರೋಸಾಫ್ಟ್ ಕಂಪನಿ

error: Content is protected !!
Scroll to Top