ಡೈಮಂಡ್ ಲೀಗ್ ಜಯಿಸಿ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ

(ನ್ಯೂಸ್ ಕಡಬ) newskadaba.com ಲಾಸೆನ್, ಆ. 27. ಭಾರತದ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಅವರು ಸ್ವಿಟ್ಜರ್​ಲ್ಯಾಂಡ್​ನ ಲಾಸನ್ ನಲ್ಲಿ ನಡೆದ ಡೈಮಂಡ್​ ಲೀಗ್​ನಲ್ಲಿ ಅಗ್ರಸ್ಥಾನ ಪಡೆದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೇ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.


ವಿಶ್ವ ಚಾಂಪಿಯನ್​ ಶಿಪ್​ನಲ್ಲಿ ಬೆಳ್ಳಿ ಗೆದ್ದ ಬಳಿಕ ನೀರಜ್ ಚೋಪ್ರಾ ಗಾಯಕ್ಕೆ ತುತ್ತಾಗಿದ್ದರು. ಇದರಿಂದ ಕಾಮನ್​ವೆಲ್ತ್​ ಗೇಮ್ಸ್​ನಿಂದ ಹೊರಗುಳಿದಿದ್ದ ಇವರು ಸ್ವಿಸ್​​ನ ಡೈಮಂಡ್​ ಲೀಗ್​ನಲ್ಲಿ 89.08 ಮೀಟರ್​ ದೂರ ಜಾವೆಲಿನ್​ ಎಸೆಯುವ ಮೂಲಕ ಪ್ರಶಸ್ತಿ ಜಯಿಸಿದರು. ಮೊದಲ ಎಸೆತದಲ್ಲಿಯೇ 89.08 ಮೀ. ಎಸೆದ ನೀರಜ್​, ಬಳಿಕ ಎರಡನೇ ಥ್ರೋ 85.18 ಮೀ ಆಗಿತ್ತು. 6 ನೇ ಎಸೆತದಲ್ಲಿ 80.4 ಮೀಟರ್​ ಎಸೆದರು. ಲೀಗ್​ನಲ್ಲಿ ಅತಿಹೆಚ್ಚು ದೂರ ಎಸೆದ ನೀರಜ್​, ಚಾಂಪಿಯನ್​ ಆದರು. ಇದಕ್ಕೂ ಮೊದಲು ಡೈಮಂಡ್​ ಲೀಗ್​ನಲ್ಲಿ ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಅಗ್ರ ಮೂರರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದರು.

Also Read  “ನನ್ನ ಹೊಟ್ಟೆಯ ಸರ್ಜರಿಯ ಗುರುತು ಪ್ರೀತಿಯ ಸಂಕೇತ” - ತಂದೆಗೆ ಲಿವರ್ ದಾನ ಮಾಡಿದ ಪುತ್ರಿಯಿಂದ ಪೋಸ್ಟ್

 

error: Content is protected !!
Scroll to Top