ವಿಟ್ಲ ಗ್ರಾ.ಪಂ. ಸದಸ್ಯನಿಗೆ ಹಲ್ಲೆ ಆರೋಪ ➤‌ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ವಿಟ್ಲ, ಆ. 10. ಗ್ರಾ. ಪಂ ಸದಸ್ಯ ಪುನೀತ್ ಮಾಡತ್ತಾರು ಎಂಬವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ಬಂಧಿತರನ್ನು ಕೇಪು ಗಣೇಶ ಮತ್ತು ನಿಶಾಂತ್ ಶೆಟ್ಟಿ ನೀರುಮಾರ್ಗ ಎಂದು ಗುರುತಿಸಲಾಗಿದೆ. ವಿಟ್ಲದ ಚಂದಳಿಕೆ ಮಾಡತ್ತಡ್ಕ ರಸ್ತೆಯಲ್ಲಿ ಮಂಗಳವಾರದಂದು ಘಟನೆ ನಡೆದಿತ್ತು. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

Scroll to Top