ನೆಲ್ಯಾಡಿ: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ



(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ. 10. ಡೆತ್‌ನೋಟ್ ಬರೆದಿಟ್ಟು ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲ್ಯಾಡಿ ಗ್ರಾಮದ ಹೊಸವೊಕ್ಲು ಎಂಬಲ್ಲಿ ನಡೆದಿದೆ.







ಆತ್ಮಹತ್ಯೆ ಮಾಡಿಕೊಂಡವರನ್ನು ಹೊಸವೊಕ್ಲು ನಿವಾಸಿ ವಾಸುದೇವ ಗೌಡ ಎಂಬವರ ಪುತ್ರ ಅಭಿಷೇಕ್(36) ಎಂಸು ಗುರುತಿಸಲಾಗಿದೆ. ಕಳೆದ ಕಂದೂವರೆ ವರ್ಷದಿಂದ ಮೈಸೂರಿನ ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್, ಆ.7ರಂದು ಮನೆಗೆ ಬಂದಿದ್ದರು. ಮನೆಯಲ್ಲಿ ತಂದೆ ಮಾತ್ರ ಇದ್ದು ಆ.9ರಂದು ಬೆಳಿಗ್ಗೆ ತಂದೆ ಮನೆಯಿಂದ ಹೊರಗೆ ಹೋಗಿದ್ದ ವೇಳೆ ಅಭಿಷೇಕ್ ಮನೆಯೊಳಗೆ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ತಂದೆ ವಾಸುದೇವ ಗೌಡರವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top