ಪುತ್ತೂರು: ನ್ಯಾಯವಾದಿ ಶ್ಯಾಮಲ ಹೆಗ್ಡೆ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 27. ನ್ಯಾಯವಾದಿ, ಹೆಬ್ಬಾರಬೈಲು ನಿವಾಸಿ ಶ್ಯಾಮಲ ಹೆಗ್ಡೆ ರವರು ಹೃದಯಾಘಾತದಿಂದ ಇಂದು ನಿಧನರಾದರು. ಪುತ್ತೂರು ವಕೀಲ ಸಂಘದ ಸದಸ್ಯರಾಗಿದ್ದ ಇವರು, ಇತ್ತೀಚೆಗೆ ಕೆಲ ಸಮಯದಿಂದ ಅನಾರೋಗ್ಯದಿಂದಿದ್ದರು ಎನ್ನಲಾಗಿದೆ. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.

Scroll to Top