ಎಸ್ಡಿಪಿಐ ರಾಜ್ಯಾಧ್ಯಕ್ಷರಿಗೆ ಕಲ್ಲುಗುಂಡಿಯಲ್ಲಿ ಅದ್ದೂರಿ ಸ್ವಾಗತ

(ನ್ಯೂಸ್ ಕಡಬ) newskadaba.com ಸಂಪಾಜೆ, ಜ. 25. ಬೆಂಗಳೂರಿನಿಂದ ಮಂಗಳೂರು ಪ್ರಯಾಣದಲ್ಲಿದ್ದ ಎಸ್ ಡಿ ಪಿ ಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ರವರನ್ನು ಕಲ್ಲುಗುಂಡಿಯ ಕೂಲಿಷೆಡ್ ಬಳಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಸಾರ್ವಜನಿಕರು ಸೇರಿ ಸ್ವಾಗತಿಸಿದರು. ರಾಜ್ಯಾಧ್ಯಕ್ಷರಿಗೆ ರಿವೈಸ್, ರಿಯಾಝ್ ಎಸ್.ಎಂ, ವಾಹಿದ್ ರವರು ಹೂಗುಚ್ಛ ನೀಡಿ, ಎಸ್.ಡಿ.ಪಿ.ಐ ಸಂಪಾಜೆ ಗ್ರಾಮ ಸಮಿತಿ ಕಾರ್ಯದರ್ಶಿ ಶರೀಫ್ ಸೆಟ್ಟಿಯಡ್ಕ ಶಾಲು ಹೊದಿಸಿ, ಸ್ವಾಗತಿಸಿದರು.


ಈ ಸಂದರ್ಭದಲ್ಲಿ ಎಸ್ಡಿಪಿಐ ಸಂಪಾಜೆ ಗ್ರಾಮ ಸಮಿತಿಯ ಉಪಾಧ್ಯಕ್ಷರಾದ ಉದೈಫ್ ಧಂಡಕಜೆ, ಜೊತೆ ಕಾರ್ಯದರ್ಶಿ ಶಾಜಿದ್ ಐ.ಜಿ, ಕೋಶಾಧಿಕಾರಿ ಸಲೀಮ್ ದರ್ಕಾಸ್‌ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 

Scroll to Top